Ad imageAd image
- Advertisement -  - Advertisement -  - Advertisement - 

ಸೇಡಂ ತಾಲೂಕ ಪಂಚಾಯತ ಕಚೇರಿಯಲ್ಲಿ ಸ್ಥಳೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ವಿಶೇಷ ಸಭೆ

Bharath Vaibhav
ಸೇಡಂ ತಾಲೂಕ ಪಂಚಾಯತ ಕಚೇರಿಯಲ್ಲಿ ಸ್ಥಳೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ವಿಶೇಷ ಸಭೆ
WhatsApp Group Join Now
Telegram Group Join Now

ಸೇಡಂ:ತಾಲೂಕಿನಲ್ಲಿ ಮಳೆಯಿಂದಾದ ಹಾನಿಯ ಬಗ್ಗೆ ಹಾಗೂ ಅತಿವೃಷ್ಠಿ ಕುರಿತು ಇಂದು ಸೇಡಂ‌ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಸಭೆ ನಡೆಸಿದರು.

ಈ ಸಭೆಯಲ್ಲಿ ಮಳಖೇಡ, ಸಂಗಾವಿ ಟಿ, ದೊಡ್ಡ ಅಗಸಿ, ಸಣ್ಣ ಅಗಸಿ, ಚಿಮ್ಮನಚೋಡಕರ್, ಚಿಂತಪಳ್ಳಿ, ಕುರುಕುಂಟಾ, ಆಡಕಿ, ಬಟಗೇರಾ ಕೆ ಸೇರಿದಂತೆ ತಾಲೂಕಿನ ಅನೇಕ ಪ್ರದೇಶಗಳಲ್ಲಿ ಮಳೆಯಿಂದ ಹಾನಿಯಾಗಿದ್ದು ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಬೇಕೆಂದು ಹೇಳಿದರು.

ಮನೆ, ರಸ್ತೆ ಹಾಗೂ ಶಾಲಾ‌ ಕೋಣೆಗಳ‌ ಹಾನಿಯನ್ನು ಕುದ್ದು ಅಧಿಕಾರಿಗಳೆ ಭೇಟಿ‌ ನೀಡಿ, ಪರಿಶೀಲಿಸಿ ಕೂಡಲೇ ವರದಿ ಸಲ್ಲಿಸಬೇಕು, ಬೆಳೆ ಹಾನಿಯಾದ ಪ್ರದೇಶಗಳಲ್ಲಿ ಕೃಷಿ ಅಧಿಕಾರಿಗಳು ಬೆಳೆ‌ಹಾನಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ಮಾಡಿದರು.

ಚಿಂತಪಳ್ಳಿ ಬಳಿ ಸೇತುವೆ ಹಾನಿಯಾಗಿದ್ದು ಕೂಡಲೇ ಸರಿಪಡಿಸಿ ಎಂದು ಲೋಕೋಪಯೋಗಿ ಇಲಾಖೆಯ ಇ.ಇ ಗೆ ನಿರ್ದೇಶನ ನೀಡಿದರು.

ಸೇಡಂ ಪಟ್ಟಣದ ಪ್ರಮುಖ ವಾರ್ಡ್ ಗಳಲ್ಲಿ ಮಳೆ ನೀರು‌ ನಿಂತಿದ್ದು‌ ಕೂಡಲೇ‌ ಮಳೆ‌ ನೀರನ್ನು ಸ್ವಚ್ಛಗೊಳಿಸಬೇಕು, ಪಟ್ಟಣದಲ್ಲಿ ಚರಂಡಿ ವ್ಯವಸ್ಥೆಯೂ ಸಹ ಸ್ವಚ್ಛವಾಗಿಡುವಲ್ಲಿ ಪುರಸಭೆ ಅಧಿಕಾರಿಗಳು ‌ನಿಗಾ ವಹಿಸಿ‌ ಎಂದು ತಿಳಿಸಿದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!