Ad imageAd image

ಹಗಲು ಮನೆ ಕಳ್ಳರ ಬಂಧನ: ಕಾರು,ಆಭರಣ, ಮೊಬೈಲ ವಶಕ್ಕೆ ಪೋಲಿಸರ ಕಾರ್ಯಕ್ಕೆ ಸ್ಥಳಿಯರ ಮೆಚ್ಚುಗೆ.

Bharath Vaibhav
ಹಗಲು ಮನೆ ಕಳ್ಳರ ಬಂಧನ: ಕಾರು,ಆಭರಣ, ಮೊಬೈಲ ವಶಕ್ಕೆ ಪೋಲಿಸರ ಕಾರ್ಯಕ್ಕೆ ಸ್ಥಳಿಯರ ಮೆಚ್ಚುಗೆ.
WhatsApp Group Join Now
Telegram Group Join Now

ಗೋಕಾಕ : ಮನೆ ಬಾಗಿಲು ಮುರಿದು ಚಿನ್ನ ಮತ್ತು ನಗದು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳರನ್ನು ಪತ್ತೆ ಹಚ್ಚಿ ಬಂದಿಸುವಲ್ಲಿ ಗೋಕಾಕ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ.

ದಿನಾಂಕಃ 29/04/2025 ರಂದು ಗೋಕಾಕ ತಾಲ್ಲೂಕಿನ ಮಿಡಕನಹಟ್ಟಿ ಗ್ರಾಮದಲ್ಲಿ ಮಹಾದೇವ ಪಂಡಪ್ಪ ಸವಸುದ್ದಿ, ಇವರ ಮನೆಯ ಮುಂಬಾಗಿಲದ ಕೀಲಿ ಕೊಂಡಿಯನ್ನು ಮುರಿದು ಮನೆಯ ಒಳಗೆ ನುಗ್ಗಿ ಟ್ರೇಜರಿಯ ಬಾಗಿಲನ್ನು ಮುರಿದು ಅದರಲ್ಲಿನ 150 ಗ್ರಾಂ ತೂಕಿನ ಬಂಗಾರದ ಆಭರಣಗಳು ಮತ್ತು 20 ಸಾವಿರ ರೂ ನಗದು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಪೋಲಿಸರು ಬೆಳಗಾವಿಯ ಪೋಲಿಸ್ ಅಧಿಕ್ಷಕರಾದ ಬೀಮಾಶಂಕರ ಗುಳೇದ ಇವರ ಆದೇಶದಂತೆ ಡಿಎಸ್ಪಿ ರವಿ ಡಿ ನಾಯಕ ಇವರ ಮಾರ್ಗದರ್ಶನದಲ್ಲಿ ಸಿಪಿಅಯ್ ಸುರೇಶಬಾಬು ಅವರ ನೇತೃತ್ವದಲ್ಲಿ ತಂಡ ರಚಿಸಿ ಗ್ರಾಮೀಣ ಪಿಎಸ್ ಐ ಕಿರಣ ಮೊಹಿತೆ ಮತ್ತು ಸಿಬ್ಬಂದಿಗಳು ಕಳ್ಳತನ ಮಾಡಿದ ಬೈಲಹೊಂಗಲ ತಾಲೂಕಿನ ರಾಮಚಂದ್ರ @ ಮೊಹರೆ ಗ್ರಾಮದ ರಾಮಸಿದ್ದ ಫಕೀರಪ್ಪ ತಳವಾರ, ವಯಸ್ಸು- 19 ವರ್ಷ 2) ಕೊಳ್ಳಾನಟ್ಟಿ ಗ್ರಾಮದ ನಾಗರಾಜ ಶಿವಲಿಂಗ ಮ್ಯಾಗೇರಿ,21ವರ್ಷ,ಇವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಕಳ್ಳತನ ಮಾಡಿದ ಬಂಗಾರದ ಆಭರಣ ಮಾರಿ ಖರೀದಿ ಮಾಡಿದ್ದ ಆರೋಪಿತರ ಬಳಿಯಿದ್ದ ಕಾರು ಮತ್ತು ಕೃತ್ಯಕ್ಕೆ ಬಳಸಿದ್ದ ಮೊಟರ ಬೈಕ್, ಮೊಬೈಲ ,ಉಳಿದ ಬಂಗಾರ ಆಭರಣ, ಮತ್ತು ನಗದು ಹಣವನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸದರಿ ಪ್ರಕರಣದಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಅಯ್, ಸುರೇಶಬಾಬು, ಪಿಎಸ್ಐ ಕಿರಣ ಮೊಹಿತೆ,ಹೆಚ್ಚುವರಿ ಪಿಎಸ್ಐ ಶ್ರೀಮತಿ ಎಲ್ ಎಲ್ ಪತ್ತೆನ್ನವರ ಮತ್ತು ಸಿಬ್ಬಂದಿಗಳಾದ ಬಿ ವಿ ನಿರ್ಲಿ,ಕುಮಾರ ಪವಾರ, ಜಗದೀಶ ಗುಡ್ಲಿ, ಮಾರುತಿ ಪಡದಲ್ಲಿ, ಆರ್ ಕೆ ಉದಪುಡಿ, ಡಿಜಿ ಕೊಣ್ಣೂರ, ಎನ್ ಎಲ್ ಮಂಗಿ, ಡಿ ಬಿ ಅಂತರಗಟ್ಟಿ, ಎಮ್ ಬಿ ನಾಯಿಕವಾಡಿ, ಎಚ್ ಡಿ ಗೌಡಿ, ವಿ ಎಲ್ ನಾಯ್ಕವಾಡಿ, ವಿಠಲ ಖೋತ್,ಎನ್ ಜಿ ದುರದುಂಡಿ, ಎಸ್ ಬಿ ಮಾನಪ್ಪಗೋಳ, ಶಿವಾನಂದ ಕಲ್ಲೋಳಿ, ಪಿ ಎಸ್ ಕಾಡಗಿ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್‌ನ ಸಚೀನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಇವರ ಕಾರ್ಯವನ್ನು ಬೆಳಗಾವಿ ಎಸ್.ಪಿ ರವರು ಶ್ಲಾಘನೆ ವ್ಯಕ್ತ ಪಡಿಸಿ ಪ್ರಶಂಸಿರುತ್ತಾರೆ.

ವರದಿ :ಮನೋಹರ ಮೇಗೇರಿ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!