ಮುದಗಲ್ಲ :-ರಾಜ್ಯದಲ್ಲಿ ಜಾರಿಯಾದ ಶಕ್ತಿ ಯೋಜನೆ ಪರಿಣಾಮಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರತಿನಿತ್ಯ ಕೆಲಸಕ್ಕೆತೆರಳುವ ಪುರುಷ ಪ್ರಯಾಣಿಕರು ಪರದಾಡುವಂಥ ಸ್ಥಿತಿನಿರ್ಮಾಣವಾಗಿದೆ.ಮುದಗಲ್ಲ ಪಟ್ಟಣ ಹಾಗೂ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಲಿಂಗಸೂರು ತಾಲೂಕು ತೆರಳಲು ಸರಿಯಾದ ಬಸ್ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಬೆಳಗಿನ ಸಮಯ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳಬೇಕೆಂದರೆ ತುಂಬಿದ ಬಸ್‌ನಲ್ಲಿ ಜೋತು ಬಿದ್ದು ಹೋಗುವಸ್ಥಿತಿ ನಿರ್ಮಾಣವಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಕ್ಯಾರೆ ಎನ್ನುತ್ತಿಲ್ಲ.ಏನಾದರೂ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಇಂದು ಬೆಳಿಗ್ಗೆ ಹೋಗುವ ಬಾದಾಮಿ ಇಂದ ರಾಯಚೂರು ಹೋಗುವ ಬಸ್ ನಲ್ಲಿ ಮುದಗಲ್ಲ ನ ವಿಧ್ಯಾರ್ಥಿ ಗಳು ಬಸ್ ಗೆ ಜೋತು ಬಿದ್ದು ಹೋಗುವ ಸ್ಥಿತಿ ಕಂಡು ಸ್ಥಳೀಯ ಜನರು ಪುರಸಭೆ ಮುಂದೆ ಬಸ್ ನಿಲ್ಲಿಸಿ ಬಸ್ ಗೆ ಜೋತು ಬಿದ್ದ ವಿಧ್ಯಾರ್ಥಿ ಗಳು ಗಳನ್ನು ಬಸ್ ಒಳಗಡೆ ಕಳಿಸುವ ದೃಶ್ಯ ಕಂಡು ಬಂದಿತು ಬಸ್ ಡೈವರ್,ಹಾಗೂ ಕಂಡಕ್ಟರ್ ವಿರುದ್ಧ
ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದರು
ಇಗಾ ಆದರೂ ಎಚ್ಚತ್ತು ಕೊಂಡು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆ ಹೆಚ್ಚಿನ ಬಸ್ ಸೌಲಭ್ಯವನ್ನು ಕಲ್ಪಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗಬೇಕು ಎಂದು ಮುದಗಲ್ಲನ ಸ್ಥಳೀಯರಾದ ಬಸವರಾಜ ಬಂಕದಮನಿ , ಲಖಾನ್ , ಸುರೇಶ್ ,ಹಾಗೂ ಅಹಮದ್ , ಅಮರೇಶ , ರಾಮಣ್ಣ ಹಾಗೂ ಮಂಜುನಾಥ , ಸ್ಥಳೀಯ ಸವ೯ಜನಿಕರು ಆಗ್ರಹಿಸಿದ್ದಾರೆ.
ವರದಿ:- ಮಂಜುನಾಥ ಕುಂಬಾರ