ಬೆಂಗಳೂರು : ಬೆಂಗಳೂರಿನ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಕ್ಯಾನ್ಸರ್ಕಾರಕ ಅಂಶ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಬಳಕೆ ಬ್ಯಾನ್ (Plastic ban) ಮಾಡಿದೆ.
ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಬೊಮ್ಮಸಂದ್ರದ ಬ್ರಾಹ್ಮಿನ್ಸ್ ವೆಜ್ ಕೆಫೆ ಹೋಟೆಲ್ನ Brahmin Cafe Hotel) ಇಡ್ಲಿ ಸಾಂಬಾರ್‌ನಲ್ಲಿ (Idly Sambar) ಜಿರಳೆ (Cockroach) ಕಂಡುಬಂದಿದೆ. ಇದರಿಂದ ಗ್ರಾಹಕ ಶಾಕ್ ಆಗಿದ್ದು, ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದು ಬ್ರಾಹ್ಮಿನ್ ಕೆಫೆಯನ್ನು ಸೀಲ್ಡೌನ್ ಮಾಡಿದ್ದಾರೆ.




