ಸೆ.13ರಂದು ರಾಷ್ಟ್ರೀಯ ಬೃಹತ್ ಲೋಕ ಅದಾಲತ್ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು:ನ್ಯಾಯಾಧೀಶೆ ಎಂ ಭಾರತಿ
ಬಾಗೇಪಲ್ಲಿ :- ರಾಷ್ಟ್ರೀಯ ಬೃಹತ್ ಲೋಕ ಅದಲತ್ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಹಿರಿಯ ಶ್ರೇಣಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತಹ ಗೌರವಾನ್ವಿತ ನ್ಯಾಯಾಧೀಶರಾದ ಭಾರತಿ ಎಂ ರವರು ಸೆಪ್ಟಂಬರ್ 13ರಂದು ಈ ರಾಜ್ಯದಲ್ಲಿ ಬೃಹತ್ ಲೋಕ ಅದಾಲತ್ ಆಯೋಜನೆ ಮಾಡಲಾಗಿದೆ.
ಲೋಕ ಅದಾಲತ್ ಸಾರ್ವಜನಿಕರು ತಾವು ದಾಖಲಿಸಿರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು.ಈ ಒಂದು ಬೃಹತ್ ಲೋಕ ಅದಾಲತ್ ರಾಜೀ ಮಾಡಿಕೊಳ್ಳುವ ಪ್ರಕರಣಗಳಿಗೆ ನ್ಯಾಯಾಲಯವು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಸದರಿ ಶುಲ್ಕವನ್ನು ಪಕ್ಷಿದಾರರಿಗೆ ಹಿಂದಿರುಗಿಸಲಾಗುವುದು ಅಲ್ಲದೆ ವಕೀಲರ ಶುಲ್ಕ ನ್ಯಾಯಾಲಯಕ್ಕೆ ಅಳೆದಾಡುವಂತಹ ಸಮಯ ಇತ್ಯಾದಿ ಸಹ ಉಳಿಯುತ್ತದೆ.

ಸಾರ್ವಜನಿಕರು ಈ ಬೃಹತ್ ಲೋಕ ಅದಾಲತ್ ತಾವುಗಳು ದಾಖಲಿಸಿರುವಂತಹ ಪ್ರಕರಣಗಳಾದ ವಿಭಾಗ ಕಾಗಿರುವ ದಾವೇ, ಚೆಕ್ ಬೌನ್ಸ್ ಪ್ರಕರಣ, ಮೋಟಾರ್ ವಾಹನ, ವೈವಾಹಿಕ ದಾಂಪತ್ಯ ಜೀವನದ ಪ್ರಕರಣ, ಕ್ರಿಮಿನಲ್ ಪ್ರಕರಣಗಳು, ನ್ಯಾಯಾಲಯದ ಮುಂದೆ ಹೊಡಿರುವ ಪ್ರಕರಣಗಳನ್ನ ಕಕ್ಷಿದಾರರು ರಾಜೀ ಇತ್ಯರ್ಥ ಪಡಿಸಿಕೊಂಡು ನ್ಯಾಯಕ್ಕೆ ನ್ಯಾಯಾಲಯಕ್ಕೆ ಹಳೆದಾಡುವಂತಹ ಸಮಯ ಆರೋಗ್ಯ,ವೆಚ್ಚ,ಎಲ್ಲವನ್ನು ಕಡಿವಾನ ಹಾಕಬಹುದು ಆದುದರಿಂದ ಈ ಒಂದು ಲೋಕ ಅದಾಲತ್ ಸದುಪಯೋಗವನ್ನು ಸಾರ್ವಜನಿಕರು,
ಕಕ್ಷಿದಾರರು ಸದುಪಯೋಗ ಪಡಿಸಿಕೊಳ್ಳಬೇಕು.
ಅಲ್ಲದೇ ನಮ್ಮ ಬಾಗೇಪಲ್ಲಿ ತಾಲೂಕಿನ ಹಿರಿಯ ಮತ್ತು ಹಿರಿಯ ವಕೀಲರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ನಮ್ಮ ಬಾಗೇಪಲ್ಲಿ ತಾಲೂಕು ಮೊದಲನೇ ಸ್ಥಾನದಲ್ಲಿ ನಿಲ್ಲಿಸಲು ಪ್ರತಿಯೊಬ್ಬರು ಕೈಚೋಡಿಸಬೇಕು ಎಂದು ತಿಳಿಸಿದರು.
ಜನರು ಉತ್ತಮವಾದಂತಹ ವ್ಯಕ್ತಿತ್ವವನ್ನು .ಆ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಸಹ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ನಮಗೆ ಹುಟ್ಟು ಉಚಿತ ಸಾವು ಖಚಿತ ಆದುದರಿಂದ ಈ ಮಧ್ಯದ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ನಾಲ್ಕು ಜನರಿಗೆ ಸಹಾಯ ಮಾಡುವಂತಹ ಗುಣವನ್ನು ಬೆಳೆಸಿಕೊಳ್ಳಬೇಕು ಆಗ ನಮಗೆ ದೇವರು ಒಳ್ಳೆಯದು ಬಯಸುತ್ತಾರೆ ನಾವುಈ ಭೂಮಿ ಮೇಲೆ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಬೃಹತ್ ಲೋಕ ಅದಾಲತ್ ನ ಕಕ್ಷಿದಾರರು ಪ್ರಕರಣಗಳನ್ನು ರಾಜೀ ಮಾಡಿಕೊಳ್ಳುವುದರಿಂದ ತಮ್ಮ ಆರೋಗ್ಯ,ವಯಸ್ಸು ಮತ್ತು ಸಮಯ, ಹಣದ ದುಂದು, ವೆಚ್ಚವನ್ನು ಕಡಿವಾಣ ಹಾಕಬಹುದು ಆದುದರಿಂದ ಸಾರ್ವಜನಿಕರು ಈ ಬೃಹತ್ ಲೋಕದಲತನ ಸದುಪಯೋಗವನ್ನು ಪಡೆಸಿಕೊಂಡು ತಮ್ಮ ಉತ್ತಮವಾದ ಜೀವನವನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ದಾಂಪತ್ಯ ಜೀವನ ಪುನರ್ ಸ್ಥಾಪನೆಗಾಗಿ ಹೊಡಿರುವ ಪ್ರಕರಣಗಳಲ್ಲಿ ದಂಪತಿಗಳು ತಮ್ಮ ಇಗೋ ಮತ್ತು ಜಂಬವನ ಬದಿ ಕೊಟ್ಟಿ ನ್ಯಾಯಕ್ಕೆ ಬರುವಂತಹ ಮೊದಲೇ ರಾಜಿ ಮಾಡಿಕೊಂಡು ಉತ್ತಮವಾದಂತ ಜೀವನ ನಡೆಸಿದ್ದಾದಲ್ಲಿ ಸುಖಮಯವಾದಂತಹ ಜೀವನವನ್ನು ನೋಡಬಹುದು ಇಲ್ಲವಾದಲ್ಲಿ ಇಡೀ ತಮ್ಮ ಆಯುಷ್ಯ ನ್ಯಾಯಾಲಯಕ್ಕೆ ಮತ್ತು ಹಣವನ್ನು ಖರ್ಚು ಮಾಡುವಂತದ್ದಾಗುತ್ತದೆ ಆದುದರಿಂದ ಇಂತಹ ಎಲ್ಲಾ ಪ್ರಕರಣಗಳನ್ನು ಮಾಡಿಕೊಂಡು ಉತ್ತಮವಾದಂತ ಜೀವನವನ್ನು ನಿರ್ವಹಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ರವಿ ಕಾರ್ಯದರ್ಶಿ ಆರ್ ಜಯಪ್ಪ,
ಖಜಾನ್ಸಿ ಬಿಂದು ಕುಮಾರಿ. ಹಿರಿಯ ವಕೀಲರಾದ ಅಲ್ಲ ಬಕಾಶ್,ಕರುಣಸಾಗರ್ ರೆಡ್ಡಿ, ದತ್ತಾತ್ರೆಯ, ಸತ್ಯನಾರಾಯಣ, ನರಸಿಂಹ ರೆಡ್ಡಿ, ಫಯಾಜ್ ಬಾಷಾ, ವಿ ನಾರಾಯಣ, ಮುಸ್ತಾಕ್ ಅಹಮದ್, ಏ ನಂಜುಂಡಪ್ಪ, ಎಮ್ ಬಿ ಗುರುನಾಥ್, ಟಿಎಲ್ ರಾಮಾಂಜನೇಯ, ಚಂದ್ರಶೇಖರ್, ಚಾಂದ್ ಭಾಷಾ, ಜಿಎಸ್ ರಾಮಾಂಜಿ, ವೆಂಕಟನಾರಾಯಣ, ಮಂಜುನಾಥ್,ನಾಗಭೂಷಣ, ಬಾಲು ನಾಯ್ಕ ಎಂಆರ್ ಮಂಜುನಾಥ್, ರವನ, ಉಮೇಶ್ ಸಿವಿ ನರೇಂದ್ರಬಾಬು, ಇತರ ವಕೀಲರು ನ್ಯಾಯದ ಸಿಬ್ಬಂದಿ ಹಾಜರಿದ್ದರು.
ವರದಿ :ಯಾರಬ್. ಎಂ.




