Ad imageAd image

ತಾಲೂಕು ಕಾನೂನು ಸೇವೆಗಳ ಸಮಿತಿ, ಕುರಿತು ಲೋಕ ಅದಾಲತ.

Bharath Vaibhav
ತಾಲೂಕು ಕಾನೂನು ಸೇವೆಗಳ ಸಮಿತಿ, ಕುರಿತು ಲೋಕ ಅದಾಲತ.
WhatsApp Group Join Now
Telegram Group Join Now

ಚಿಕ್ಕೋಡಿ :-  ಮಾನ್ಯ ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರ ಬೆಂಗಳೂರು ಅವರ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ದಿನಾಂಕ 13.07.2024 ರಂದು ರಾಷ್ಟ್ರೀಯ ಲೋಕದಲ ಆಯೋಜಿಸಲಾಗಿದೆ ಸಾರ್ವಜನಿಕರು ತಮ್ಮ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ .

ಲೋಕದಲತ್ ನಲ್ಲಿ ಈ ಕೆಳಗಿನ ಪ್ರಕರಣಗಳನ್ನು ರಾಜಿ ಸಂಧಾನದ ಮುಖಾಂತರ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ .

ವ್ಯಾಜ್ಯ ಪೂರ್ವ ಪ್ರಕರಣಗಳು

1)ಚೆಕ್ಕು ಅಮಾನ್ಯದ ಪ್ರಕರಣಗಳು .

2)ಬ್ಯಾಂಕ್ ವಸೂಲಾತಿ ಪ್ರಕರಣಗಳು.

3)ಉದ್ಯೋಗದಲ್ಲಿ ಪುನರ್ ಸ್ಥಾಪಿಸ್ಸಲ್ಪಡುವ ಪ್ರಕರಣಗಳು
ಇತರೆ ಪ್ರಕರಣಗಳು.
4)
ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು ವೈವಾಹಿಕ ಪ್ರಕರಣಗಳು ಮತ್ತು ಇತರೆ ಸಿವಿಲ್ ಪ್ರಕರಣಗಳು ಇತ್ಯಾದಿ .

ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣಗಳು.

ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು.

ಸಾಲ ಉಸಲಾತಿ ನ್ಯಾಯಾಧಿಕರಣದ ಪ್ರಕರಣಗಳು.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ .

ಕಾಯಮ್ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳು.

ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು

1)ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು.

2)ಚೆಕ್ಕು ಅಮಾನ್ಯದ ಪ್ರಕರಣಗಳು.

3)ಬ್ಯಾಂಕ್ ವಸುಲಾತಿ ಪ್ರಕರಣಗಳು.

4)ಮೊಟರು ಅಪಘಾತ ನ್ಯಾಯಾಧಿಕರಣದ ಪ್ರಕರಣಗಳು.

5)ಕಾರ್ಮಿಕ ವಿವಾದಗಳು.

6)ವಿದ್ಯುತ್ ಹಾಗೂ ನೀರಿನ ಶುಲ್ಕಗಳು.

7)ವೈವಾಹಿಕ ಪ್ರಕರಣಗಳು (ವಿಚ್ಛೇದನ ಹೊರತುಪಡಿಸಿ).

8)ಭೂ ಸ್ವಾಧೀನ ಪ್ರಕರಣಗಳು.

9)ವೇತನ ಮತ್ತು ಬಟ್ಟೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು.

10)ಕಂದಾಯ ಪ್ರಕರಣಗಳು .

11)ರಾಜಿ ಆಗಬಲ್ಲ ಸೀವಿಲ್ ಮತ್ತು ಇತರೆ ಪ್ರಕರಣಗಳು.

ನ್ಯಾಯಾಲಯಗಳಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡಲಾಗುವುದು.

ಇಬ್ಬರಿಗೂ ಒಪ್ಪಿಗೆ ಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿದು ವಿವಾದವು ತೀರ್ಮಾನವಾಗುತ್ತದೆ.

ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಪಡೆದುಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು.

ಸಂದಾನ ಕಾರರು ಸೂಚಿಸುವ ಪರಿಹಾರ ಒಪ್ಪಿಗೆ ಆದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು.

ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇದೊಂದು ವಿಶೇಷ ಅವಕಾಶವಾಗಿದೆ.

ವಿಶೇಷ ಸೂಚನೆ ಏನೆಂದರೆ ಪ್ರತಿದಿನ ಚಿಕ್ಕೋಡಿಯ ಎಲ್ಲ ನ್ಯಾಯಾಲಯಗಳಲ್ಲಿ ಸಾಯಂಕಾಲ ನಾಲ್ಕು ಗಂಟೆಯಿಂದ ಆರು ಗಂಟೆಯವರೆಗೆ ಲೋಕ ಅದಾಲತ್ ಗೆ ಸಂಬಂಧಿಸಿದ ಪೂರ್ವಬಾವಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಲಿವೆ.

:ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ತಾಲೂಕು ಕಾನೂನು ಸೇವೆಗಳ ಸಮಿತಿ, ಚಿಕ್ಕೋಡಿ
ತಾಲೂಕು ನ್ಯಾಯಾಲಯಗಳ ಕಟ್ಟಡ ಚಿಕ್ಕೋಡಿ. ತಾಲೂಕು: ಚಿಕ್ಕೋಡಿ, ಜಿಲ್ಲಾ: ಬೆಳಗಾವಿ.

ಈ ಪತ್ರಿಕಾ ಪ್ರಕಟಣೆ ಸಭೆಯಲ್ಲಿ ಭಾಗವಹಿಸಿದವರು
ಶ್ರೀಮತಿ ಕಾವೇರಿ, ಗೌರವಾನ್ವಿತ 7 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬೆಳಗಾವಿ ಬೈಠಕ ಚಿಕ್ಕೋಡಿ,

ಶ್ರೀ ಹರೀಶ ರಂಗನಗೌಡ ಪಾಟೀಲ, ಗೌರವಾನ್ವಿತ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ತಾಲೂಕು ಕಾನೂನು ಸೇವೆಗಳ ಸಮಿತಿ, ಚಿಕ್ಕೋಡಿ

ಶ್ರೀ ಮಹಾದೇವ ಕಾನಟ್ಟಿ ಗೌರವಾನ್ವಿತ ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಮತ್ತು ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವೆಗಳ ಸಮಿತಿ, ಚಿಕ್ಕೋಡಿ

ಶ್ರೀ ಎಸ್. ಆರ್. ವಾಲಿ, ಮಾನ್ಯ ಕಾರ್ಯದರ್ಶಿಗಳು, ನ್ಯಾಯವಾದಿಗಳ ಸಂಘ, ಚಿಕ್ಕೋಡಿ

ಶ್ರೀ ವಿ.ಜಿ. ಮಾದಪ್ಪಗೋಳ, ಮಾನ್ಯ ಉಪಾಧ್ಯಕ್ಷರು, ನ್ಯಾಯವಾದಿಗಳ ಸಂಘ, ಚಿಕ್ಕೋಡಿ ಮುಂತಾದವರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!