ನವದೆಹಲಿ : ವಿವಿಧ ವಿಷಯಗಳ ಬಗ್ಗೆ ವಿರೋಧ ಪಕ್ಷದ ಸದಸ್ಯರ ಕೋಲಾಹಲ,ಗದ್ದಲದ ನಡುವೆ ಲೋಕಸಭೆಯನ್ನು ಸೋಮವಾರ ಮುಂದೂಡಲಾಯಿತು.
ಮಧ್ಯಾಹ್ನ 12 ಗಂಟೆಗೆ ಸದನ ಮತ್ತೆ ಸೇರಿದ ಕೂಡಲೇ, ವಿರೋಧ ಪಕ್ಷದ ಸದಸ್ಯರು ಉತ್ತರ ಪ್ರದೇಶದ ಸಂಭಾಲ್ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಘೋಷಣೆಗಳನ್ನು ಕೂಗಿದರು. ಮತ್ತು ಯುಎಸ್ ನ್ಯಾಯಾಲಯದಲ್ಲಿ ಪ್ರಮುಖ ಉದ್ಯಮಿಯ ವಿರುದ್ಧ ಮಾಡಲಾಗಿರುವ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಸಭಾಧ್ಯಕ್ಷರಾಗಿದ್ದ ಬಿಜೆಪಿ ಸದಸ್ಯೆ ಸಂಧ್ಯಾ ರೇ, ಸದನದಲ್ಲಿ ಕಲಾಪಕ್ಕೆ ಅವಕಾಶ ನೀಡಲು ಸದಸ್ಯರು ಆಸಕ್ತಿ ಹೊಂದಿಲ್ಲವೇ ಎಂದು ಪ್ರಶ್ನಿಸಿದರು.ನಂತರ ಸಭಾಧ್ಯಕ್ಷರು ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ, ಈ ವರ್ಷ ಸಂಸದೀಯ ಚುನಾವಣೆಯಲ್ಲಿ ಗೆದ್ದ ಇಬ್ಬರು ಸಂಸದರು ಸೇರಿದಂತೆ ಅಗಲಿದ ಸದಸ್ಯರಿಗೆ ಗೌರವ ಸಲ್ಲಿಸಿದ ನಂತರ ಕೆಳಮನೆಯನ್ನು ಮಧ್ಯಾಹ್ನ 12 ರವರೆಗೆ ಮುಂದೂಡಲಾಯಿತು.
ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿದ 75 ನೇ ವಾರ್ಷಿಕೋತ್ಸವದ ವರ್ಷವಿಡೀ ಆಚರಣೆಗಳಿಗೆ ಚಾಲನೆ ನೀಡಲು ಸಂಸತ್ತು ಮಂಗಳವಾರ ಸಂವಿಧಾನ್ ಸದನದ ಸೆಂಟ್ರಲ್ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ನಡೆಸಲಿದೆ.