Ad imageAd image

ಲೋಕಸಭಾ ಚುನಾವಣೆ 2024 : ಮುದಗಲ್ಲ ಪುರಸಭೆ ವತಿಯಿಂದ ಮತದಾನ ಜಾಗೃತಿ..

Bharath Vaibhav
ಲೋಕಸಭಾ ಚುನಾವಣೆ 2024 : ಮುದಗಲ್ಲ ಪುರಸಭೆ ವತಿಯಿಂದ ಮತದಾನ ಜಾಗೃತಿ..
WhatsApp Group Join Now
Telegram Group Join Now

ಮುದಗಲ್ಲ : ಐತಿಹಾಸಿಕ ಮುದಗಲ್ಲ ಪಟ್ಟಣದ ಸೋಮವಾರ ಸಂತೆ ಬಜಾರ್ ನಲ್ಲಿ ಲೋಕಸಭಾ ಚುನಾವಣೆ ಮತದಾನ ಕುರಿತು ಮುದಗಲ್ಲ ಪುರಸಭೆ ವತಿಯಿಂದ ಜಾಗೃತಿ ಮೂಡಿಸಲಾಯಿತು .

ಜಾಗೃತಿಯಲ್ಲಿ ಮುದಗಲ್ಲ ಪುರಸಭೆ ನೈರ್ಮಲ್ಯ ಅಧಿಕಾರಿ ರಹೀಮತ್ ಉನ್ನಿಸ್ ಬೇಗಂ,ಹಾಗೂ ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು, ಭಾಗವಹಿಸಿದ್ದರು.

ಲೋಕಸಭಾ ಚುನಾವಣೆಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ, ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು ನಾಗರಿಕರು ಅತ್ಯುತ್ಸಾಹದಿಂದ ಭಾಗವಹಿಸಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುದಗಲ್ಲ ನ ಪುರಸಭೆ ಕಿರಿಯ ನೈರ್ಮಲ್ಯ ಅಧಿಕಾರಿ ರಹೀಮತ್ ಉನ್ನಿಸ್ ಬೇಗಂ,ಅವರು ಮಾತನಾಡಿದರು ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾಗಿರುವ ಲೋಕಸಭಾ ಚುನಾವಣೆಯಲ್ಲಿ ನಾವು ಮತದಾನ ಮಾಡುವ ಮೂಲಕ ಭಾಗವಹಿಸ ಬೇಕು. ಅದರಲ್ಲಿಯೂ ವಿಶೇಷವಾಗಿ ಹೆಣ್ಣು ಮಕ್ಕಳು ಹಾಗೂ ನಾಗರಿಕರು ಹಾಗೂ ಹಿರಿಯ ನಾಗರಿಕರು ಹಾಗೂ ನವ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ನಾಗರಿಕರು ತಮಗೆ ಏನು ಬೇಕು? ಏನು ಬೇಡ? ಎನ್ನುವ ಕುರಿತಾದ ದೇಶದ ಅಭಿವೃದ್ಧಿ ಕುರಿತಾದ ಪರಿಕಲ್ಪನೆಗಳು ಸಾಕಾರಗೊಳ್ಳಲು ಮತದಾನದ ಹಕ್ಕು ಚಲಾಯಿಸುವುದು ಅವಶ್ಯಕ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುದಗಲ್ಲ ನ ಪೌರ ಕಾರ್ಮಿಕರಾದ ಬಸವರಾಜ ಕಟ್ಟಿಮನಿ, ಶರಣಪ್ಪ, ಬಸವರಾಜ ಜಿ, ಜಿ ಹುಲಗಪ್ಪ , ಹಾಗೂ ಸಂತೆ ಬಜಾರ್ ಇದ್ದ ಸಾವ೯ಜನಿಕರು ಉಪಸ್ಥಿತರಿದ್ದರು…

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!