ಹಾವೇರಿ: ಹಾನಗಲ್ : ಕೆ.ಡಿ.ಟಿ. ಪ್ರಕಾರ ಆರ್.ಟಿ.ಸಿ. ದುರಸ್ಥಿ ಮಾಡಿಕೊಡಲು 12 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಶಿರಸ್ತೆದಾರ ಸೇರಿ ಇಬ್ಬರು ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹಾನಗಲ್ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ನಡೆದಿದೆ.

ಶಿರಸ್ತೆದಾರ ತಮ್ಮಣ್ಣ ಕಾಂಬಳೆ, ದ್ವಿತೀಯ ದರ್ಜೆ ಸಹಾಯಕ ಗೂಳಪ್ಪ ಮನಗೂಳಿ ಹಾಗೂ
ಶಿವಾನಂದ ಬಡಿಗೇರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ರಾಮತೀರ್ಥ ಹೊಸಕೋಪ್ಪ ಗ್ರಾಮದ ಶಂಕ್ರಪ್ಪ ಗುಮಗುಂಡಿ ಎಂಬುವರು ಕೆ.ಡಿ.ಟಿ. ಪ್ರಕಾರ ಆರ್.ಟಿ.ಸಿ.ದುರಸ್ಥಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆರ್.ಟಿ.ಸಿ. ದುರಸ್ಥಿ ಮಾಡಿಕೊಡಲು ಆರೋಪಿಗಳು 12 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವಕೀಲರಾದ ನವೀನ್ ಬಸವನಗೌಡ ಪಾಟೀಲ್ ಎಂಬುವರು ಲೋಕಾಯುಕ್ತ ಪೊಲೀರಿಗೆ ದೂರು ನೀಡಿದ್ದರು. ಶನಿವಾರ ದೂರುದಾರರಿಂದ
ಕಚೇರಿಯಲ್ಲಿಯೇ 12, ಸಾವಿರ ಲಂಚದ ಹಣವನ್ನು ಪಡೆಯುತ್ತಿರುವಾಗ ಹಾವೇರಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಮೂವ್ವರು ಆರೋಪಿಗಳನ್ನು ರೆಡ್ ಹ್ಯಾಂಡ ಆಗಿ ಹಿಡಿದು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.
ವರದಿ: ರಮೇಶ್ ತಾಳಿಕೋಟಿ




