ಖಾನಾಪುರ: ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ತಹಸೀಲ್ದಾರ್ ಪ್ರಕಾಶ್ ಗಾಯಕವಾಡ ಅವರ ಬೆಳಗಾವಿಯ ಗಣೇಶಪುರ ಹಾಗೂ ನಿಪ್ಪಾಣಿಯ ಸ್ವಂತ ಮನೆ ಮತ್ತು ಖಾನಾಪೂರದಲ್ಲಿರುವ ಬಾಡಿಗೆ ಮನೆ ಮತ್ತು ತಹಸೀಲ್ದಾರ್ ಕಛೇರಿ ಸೇರಿದಂತೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಇಲಾಖೆಯ ಎಸ . ಪಿ ಹನುಮಂತರಾಯ ನೆತ್ರತ್ವದಲ್ಲಿ ದಾಳಿ ನಡೆದಿದೆ.
ಕೇಲವು ದಿನಗಳಿಂದ ತಹಸೀಲ್ದಾರ್ ಪ್ರಕಾಶ್ ಗಾಯಕವಾಡ ಅವರು ಅಕ್ರಮ ಆಸ್ತಿ ಗಳಸಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಹರಿದಾಡುತ್ತಿತ್ತು ಅಷ್ಟೆ ಅಲ್ಲದೆ ಕೆಲ ಸಾಮಾಜಿಕ ಹೋರಾಟಗಾರರು ಅವರ ಆಸ್ತಿ ತನಿಖೆ ಮಾಡಬೇಕೆಂದು ದೂರು ಕೂಡಾ ಸಲ್ಲಿಸಿದ್ದರು.
ಅದರಂತೆ ಇಂದು ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ನಿಪ್ಪಾಣಿ ಬೆಳಗಾವಿ ಖಾನಾಪೂರಗಳಲ್ಲಿ ಇರುವ ಅವರ ಮನೆ ಹಾಗೂ ಕಛೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ದಾಳಿಯಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ಪುಷ್ಪಲತಾ ಹಾಗೂ ಪಿ ಐ ನಿರಂಜನ ಪಾಟೀಲ ಉಪಸ್ಥಿತಿಯಲ್ಲಿ ತನಿಖೆ ಮುಂದುವರೆದಿದೆ
ವರದಿ: ರಾಜು ಮುಂಡೆ