ಬೆಂಗಳೂರು : ಕಣ್ಣು ಕುಕ್ಕುವಂಥ ಬಂಗಲೆ, ಎಕರೆಗಟ್ಟಲೆ ಫಾರ್ಮ್ ಹೌಸ್, ಮನೆ ಮನೆಯಲ್ಲೂ ಶೋಧ, ಬೈಕ್, ಕಾರಲ್ಲೂ ತಲಾಶ್, ಕಚೇರಿಗಳಲ್ಲೂ ಪರಿಶೀಲನೆ. ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ದಾಳಿಗೊಳಗಾದ ಅಧಿಕಾರಿಗಳು ಹಾಗೂ ಪತ್ತೆಯಾದ ಆಸ್ತಿ ವಿವರ
ಶ್ಯಾಮ್‌ಸುಂದರ್ ಮಾರುತಿ ಕಾಂಬ್ಳೆ
ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಬಾಗಲಕೋಟೆ
2.04 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ
15 ನಿವೇಶನ, 3 ವಾಸದ ಮನೆ ಸೇರಿ 1.75 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ
28.83 ಲಕ್ಷ ರೂ. ಮೌಲ್ಯದ ಚರಾಸ್ತಿ
28.26 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ
52 ಸಾವಿರ ರೂ. ಮೌಲ್ಯದ ವಾಹನಗಳು
ಮಲ್ಲಪ್ಪ ಹನಮಂತಪ್ಪ ಯರಜರಿ
ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಬಸವನ ಬಾಗೇವಾಡಿ, ವಿಜಯಪುರ ಜಿಲ್ಲೆ
3.17 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ
3 ನಿವೇಶನ, 2 ವಾಸದ ಮನೆ, 20 ಎಕರೆ 3 ಗುಂಟೆ ಕೃಷಿ ಜಮೀನು ಸೇರಿ 1.71 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ
1.45 ಕೋಟಿ ರೂ. ಮೌಲ್ಯದ ಚರಾಸ್ತಿ
14.42 ಲಕ್ಷ ರೂ. ನಗದು
86.47 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ
21 ಲಕ್ಷ ರೂ. ಮೌಲ್ಯದ ವಾಹನಗಳು
15 ಲಕ್ಷ ರೂ. ಬ್ಯಾಂಕ್ ಠೇವಣ
9 ಲಕ್ಷ ರೂ. ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು
ಮಾರುತಿ ಯಶ್ವಂತ್ ಮಾಳ್ವಿ
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಸಿದ್ದಾಪುರ ಕೋಲ್ ಸಿರಸಿ ಸಹಕಾರ ಸಂಘ, ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆ
9.89 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ
7 ನಿವೇಶನಗಳು, 4 ವಾಸದ ಮನೆಗಳು, 1 ವಾಣಿಜ್ಯ ಸಂಕೀರ್ಣ ಸೇರಿದಂತೆ 9.17 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ
72.24 ಲಕ್ಷ ರೂ. ಮೌಲ್ಯದ ಚರಾಸ್ತಿ
2.02 ಲಕ್ಷ ರೂ. ನಗದು
8.22 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ
62 ಲಕ್ಷ ರೂ. ಮೌಲ್ಯದ ವಾಹನಗಳು
ಡಿ.ವಿಜಯಲಕ್ಷ್ಮೀ
ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ, ಸಿಂಧನೂರು ಉಪ ವಿಭಾಗ, ರಾಯಚೂರು ಜಿಲ್ಲೆ
4.09 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ
12 ನಿವೇಶನ, 2 ವಾಸದ ಮನೆ, 73 ಎಕರೆ 31 ಗುಂಟೆ ಕೃಷಿ ಜಮೀನು ಸೇರಿದಂತೆ 3.68 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ
40.82 ಲಕ್ಷ ರೂ. ಮೌಲ್ಯದ ಚರಾಸ್ತಿ
2.56 ಲಕ್ಷ ರೂ. ನಗದು
14.20 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ
18.45 ಲಕ್ಷ ರೂ. ಮೌಲ್ಯದ ವಾಹನಗಳು
5.61 ಲಕ್ಷ ರೂ. ಬ್ಯಾಂಕ್ ಠೇವಣಿ




