ಬೆಳಗಾವಿ : ಬೆಳಗಾವಿ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಬಳಿ 14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಕಳೆದ ಎರಡು ದಿನಗಳ ಶೋಧದ ವೇಳೆ ಅಕ್ರಮ ಆಸ್ತಿ ಪತ್ತೆಯಾಗಿದೆ. ಪರಿಶೀಲನೆ ವೇಳೆ 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 3.12 ಕೋಟಿ ಹಣ ಠೇವಣಿ ಹಾಗೂ ಕಾರು ಮತ್ತು ಬೈಕುಗಳು ಪತ್ತೆಯಾಗಿವೆ.
ಸೌವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿಯಲ್ಲಿ 18 ಸೈಟ್ ಗಳು ಪತ್ತೆಯಾಗಿವೆ. ಬೆಳಗಾವಿಯ ಆಂಜನೇಯ ನಗರ ಸೇರಿದಂತೆ ಒಟ್ಟು 7 ಕಡೆ ಲೋಕಾಯುಕ್ತ ದಾಳಿ ನಡೆಸಿದೆ. DUDC ಎಇಇ ಅಜಯ್ ಸಿಂಗ್ ರಜಪೂತ್ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗಾವಿ ನಗರದಲ್ಲಿ 3 ಮನೆ ಕಚೇರಿ ಮತ್ತು ಬ್ಯಾಂಕ್ ಲಾಕರ್ ಗಳನ್ನು ಪರಿಶೀಲನೆ ಮಾಡಿದರು ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಗೆ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು ಮನೆಯಲ್ಲಿ ಇದೀಗ ತನಿಖೆ ಮುಂದುವರೆದಿದೆ.




