ಹುಕ್ಕೇರಿ : ಮೂರು ಸಾವಿರ ರೂ ಲಂಚ ಪಡೆಯುವಾಗ ಭೂ ಮಾಪಕ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಭೂ ಮಾಪನ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಸವರಾಜ ಕಡಲಗಿ ಎಂಬ ಭೂ ಮಾಪಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಹಣ ಪಡೆಯುವಾಗ ಭೂಮಾಪಕ ಲೋಕಾಯಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. 11E ನಕ್ಷೆ ತಯಾರಿ ಮಾಡಿ ಕೊಡಲು ಲಂಚಕ್ಕೆ ಭೂ ಮಾಪಕ ಕೈ ಒಡ್ಡಿದ್ದ ಎನ್ನಲಾಗಿದೆ.
ತಂದೆ ಜಮೀನಿನ ಸ್ವಲ್ಪ ಭಾಗ ಮಗನಿಗೆ ಪರಭಾರೆ ಮಾಡಲು ನಕ್ಷೆ ಮಾಡಲು ಬಾಡ ಗ್ರಾಮದ ಪ್ರಕಾಶ ಮೈಲಾಕಿ ಎಂಬುವರು ಅರ್ಜಿ ಹಾಕಿದ್ದರು. ಲಂಚ ಕೊಡುವ ಭರವಸೆ ಬಳಿಕ ನಕ್ಷೆ ತಯಾರಿಕೆಗೆ ಭೂ ಮಾಪಕ ಮುಂದಾಗಿದ್ದ.
ಬಾಡ ಗ್ರಾಮದ ಪ್ರಕಾಶ ಮೈಲಾಕಿ ಎಂಬುವರ ಬಳಿ 8 ಸಾವಿರ ರೂ ಲಂಚದ ಬೇಡಿಕೆ ಇಟ್ಟಿರುವ ದೂರಿನ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ಹಾಗೂ ಅವರ ತಂಡ ಯಮಕನಮರಡಿ ಗ್ರಾಮದಲ್ಲಿ ಹಣ ಪಡೆಯುವಾಗ ದಾಳಿ ನಡೆಸಿ ಭೂ ಮಾಪಕ ಬಸವರಾಜ ಕಡಲಗಿಯನ್ನ ಬಂಧಿಸಿದೆ. ಭೂ ಮಾಪನ ಇಲಾಖೆಯ ಲಂಚಾವತಾರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




