ಹುಬ್ಬಳ್ಳಿ: ನಗರದಲ್ಲಿ ಕರ್ನಾಟಕ ಲೋಕಾಯುಕ್ತ ಧಾರವಾಡ ಇಲಾಖೆಯ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲಂಚ ಸ್ವೀಕರಿಸಿದ ಘಟನೆಯು ಬೆಳಕಿಗೆ ಬಂದಿದೆ.
ಪ್ರಮೋದ್ ಅಗಳಿ ಎಂಬುವವರ ವಾರಸಾ ಪ್ರಮಾಣ ಪತ್ರ ಮಾಡಿಕೊಡಲು ಭಾಷಾ ಶೇಕಸನದಿ ಗ್ರಾಮ ಸೇವಕ ವೀರಾಪುರ್ ಓಣಿ ಬಮ್ಮಪುರ್ ಸಾಚಾ ಅವರು ₹3,500 ಲಂಚದ ಬೇಡಿಕೆ ಇಟ್ಟಿದ್ದಾರೆಂಬ ದೂರು ದಾಖಲಾಗಿತ್ತು.
ದೂರು ಆಧಾರವಾಗಿ ಲೋಕಾಯುಕ್ತ ತಂಡವು ದಾಳಿ ನಡೆಸಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ಈ ದಾಳಿಯಲ್ಲಿ ಡಿಎಸ್ಪಿ ರವೀಂದ್ರ ಕುರುಬಗಟ್ಟಿ, ಇನ್ಸ್ಪೆಕ್ಟರ್ ಬಸವರಾಜ್ ಬುದ್ನಿ, ಪ್ರಸಾದ್ ಪನ್ನೇಕರ್, ಹಾಗೂ ಲೋಕಾಯುಕ್ತ ಸಿಬ್ಬಂದಿ ರವಿ ಮೊಗದ, ಸಂತೋಷ್ ಲಕ್ಕಮ್ಮನವರ್ ಸೊಪ್ಪಿ, ಕಾರ್ತಿಕ್ ಗಾಳಿ, ಮೃತ್ಯುಂಜಯ ಮಠ, ಸಂಗಯ್ಯ ಕಲ್ಮೇಶ, ನರಗುಂದ ಮತ್ತು ಇತರ ಸಿಬ್ಬಂದಿ ಭಾಗವಹಿಸಿದ್ದರು.
ಈ ಕಾರ್ಯಾಚರಣೆ ಮೂಲಕ ಲೋಕಾಯುಕ್ತ ಇಲಾಖೆ ಮತ್ತೊಮ್ಮೆ ಭ್ರಷ್ಟಾಚಾರ ವಿರುದ್ಧ ಕಠಿಣ ನಿಲುವು ತೋರಿಸಿದೆ.
ವರದಿ :ಮಹಾಂತೇಶ್ ಎಸ್ ಹುಲಿಕಟ್ಟಿ




