ಬೆಂಗಳೂರು : ಲಂಚ ಪ್ರಕರಣದಲ್ಲಿ ಮಹಿಳಾ ಪಿಎಸ್‌ಐ ಸಾವಿತ್ರಿ ಬಾಯಿ ಅವರು ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ನಡಿದಿದೆ.
ಗೋವಿಂದಪುರ ಪೊಲೀಸ್ ಠಾಣೆಯ ಮಹಿಳಾ ಪಿಎಸ್‌ಐ ಸಾವಿತ್ರಿ ಬಾಯಿ ಅವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜೂಲೈ 21, 2025ರಂದು ವರದಿಯಾಗಿದೆ,ಈ ಸಂಬಂಧ 1.25 ಲಕ್ಷ ರೂ.ಹಣ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ. ಸದ್ಯ ಲೋಕಾಯುಕ್ತ ಪೊಲೀಸರು ಸಾವಿತ್ರಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಅದರಂತೆ ಇದೀಗ ಯೂನಸ್ ನೀಡಿರುವ ದೂರಿನ ಮೇರೆಗೆ ಸಾವಿತ್ರಿ ಬಾಯಿಯವರನ್ನು ಟ್ರ್ಯಾಪ್ ಮಾಡಲಾಗಿದೆ.ಕ್ರೈಂ ನಂಬರ್ 144/25ರ ಪ್ರಕರಣದಲ್ಲಿ ‘ಬಿ ರಿಪೋರ್ಟ್’ ಸಲ್ಲಿಸುವ ಅವರು ಮೊಹಮ್ಮದ್ ಯೂನಸ್ ಎಂಬವರಿಂದ ₹1.25 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು.
ಯೂನಸ್ ಅವರು ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದು, ಆಧಾರದ ಮೇಲೆ ಟ್ರ್ಯಾಪ್ ಸಂಚು ರೂಪಿಸಲಾಗಿತ್ತು.
ನಿಗದಿಯಂತೆ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸಾವಿತ್ರಿ ಬಾಯಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಸದ್ಯ ಅವರು ಲೋಕಾಯುಕ್ತ ಠಾಣೆಯಲ್ಲಿ ವಶದಲ್ಲಿದ್ದಾರೆ ಹಾಗೂ ವಿಚಾರಣೆ ಮುಂದುವರೆದಿದೆ.




