ಕೊಪ್ಪಳ :ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ದಸ್ತಗೀರ್ ಅಲಿಯನ್ನು ಲೋಕಾಯುಕ್ತರು ಲಂಚ ಪಡೆಯುತ್ತಿರುವಾಗ ಅರೆಸ್ಟ್ ಮಾಡಿದ್ದಾರೆ.
ಎನ್‌ಜಿಒಗೆ ಪ್ರಮಾಣಪತ್ರ ನೀಡಲು ಎರಡು ಸಾವಿರ ರೂ. ಲಂಚ ಪಡೆಯಲು ಯತ್ನಿಸಿದ ಅಧಿಕಾರಿ, ಹಣವನ್ನು ನುಂಗಿದ್ದರು. ಇದನ್ನು ನೋಡಿದ ಪೊಲೀಸರು ವಾಂತಿ ಮಾಡಿಸಿ ಹಣವನ್ನು ಕಕ್ಕಿಸಿದ್ದಾರೆ.
ಲಂಚ ಪಡೆದಿದ್ದ ಎರಡು ಸಾವಿರ ರೂಪಾಯಿ ನೋಟನ್ನು ನುಂಗಿ ಸಾಕ್ಷಿನಾಶ ಮಾಡಲು ಯತ್ನಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಲೋಕಾಯುಕ್ತರು, ನೀರು ಕುಡಿಸಿ ವಾಂತಿ ಮಾಡಿಸಿ, ಹಣ ಹೊರಗೆ ತೆಗೆಸಿದ್ದಾರೆ. ಬಳಿಕ ದಸ್ತಗಿರ್ ಅಲಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.