ತುರುವೇಕೆರೆ: –ರಾಜ್ಯ ಸರ್ಕಾರಿ ನೌಕರರ ಸಂಘದ ತುರುವೇಕೆರೆ ತಾಲೂಕು ಘಟಕದ ನಿರ್ದೇಶಕನಾಗಿ ಸತತ ಎರಡನೇ ಬಾರಿಗೆ ಎಂ.ಬಿ. ಲೋಕೇಶ್ ಆಯ್ಕೆಯಾದರು.

ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಪ್ರೌಢಶಾಲೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂಚಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಂ.ಬಿ. ಲೋಕೇಶ್ 79 ಮತಗಳನ್ನು ಪಡೆದು ಜಯಶಾಲಿಯಾದರು.

ಪ್ರೌಢಶಾಲಾ ಕ್ಷೇತ್ರದಲ್ಲಿ 131 ಮತಗಳಿದ್ದು, 123 ಮತಗಳು ಚಲಾವಣೆಯಾಗಿತ್ತು. ಈ ಕ್ಷೇತ್ರದಿಂದ ಮೂರು ಜನ ಸ್ಪರ್ಧಿಸಿದ್ದು, ಎಂ.ಬಿ. ಲೋಕೇಶ್ 79 ಮತ ಪಡೆದು ಗೆಲುವಿನ ನಗೆ ಬೀರಿದರೆ, ಪ್ರತಿಸ್ಪರ್ಧಿ ಚಂದ್ರಯ್ಯ 44 ಹಾಗೂ ಗುರುರಾಜ್ ಶೂನ್ಯ ಮತ ಗಳಿಸಿದರು.
ಅಧಿಕ ಮತಗಳನ್ನು ಪಡೆದು ಲೋಕೇಶ್ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸುತ್ತಿದ್ದಂತೆ ಬೆಂಬಲಿಗ ಸ್ನೇಹಿತರು ಸಿಹಿ ಹಂಚಿ ಸಂಭ್ರಮಿಸಿದರು. ಕಳೆದ ಬಾರಿಯೂ ಸಹ ಲೋಕೇಶ್ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅವರಿಗೆ ಗೆಲುವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಚುನಾವಣೆಯಲ್ಲಿ ಜಯಗಳಿಸಿದ ಎಂ.ಬಿ.ಲೋಕೇಶ್ ಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ, ಶಿಕ್ಷಕರಾದ ರಾಜು, ನಾಗರಾಜ್, ವಿವಿಧ ಸರ್ಕಾರಿ ಪ್ರೌಢಶಾಲೆಗಳ ಬೋದಕೇತರರಾದ ಅನಿತಾ, ಸವಿತ, ಶಶಿಕಲಾ, ಜಯಲಕ್ಷ್ಮಿ, ಕೆಂಪೇಗೌಡ, ಪೂರ್ಣಚಂದ್ರ, ಶಿವರಾಜ್ ಕುಮಾರ್, ಜಯಣ್ಣ ಸೇರಿದಂತೆ ಸ್ನೇಹಿತರು, ಹಿತೈಷಿಗಳು ಅಭಿನಂದಿಸಿದರು.
ವರದಿ: ಗಿರೀಶ್ ಕೆ ಭಟ್




