Ad imageAd image

ಅಧಿಕಾರಿಗಳ ನಿರ್ಲಕ್ಷ್ಯ: ಭಾರಿ ಪ್ರಮಾಣದಲ್ಲಿ ಹೋಗೆ ಬಿಡುತ್ತಿರುವ ಬಸ್, ಪೊಲೀಸ್ ಅಧಿಕಾರಿಗಳೇ ನೋಡಿ

Bharath Vaibhav
ಅಧಿಕಾರಿಗಳ ನಿರ್ಲಕ್ಷ್ಯ: ಭಾರಿ ಪ್ರಮಾಣದಲ್ಲಿ ಹೋಗೆ ಬಿಡುತ್ತಿರುವ ಬಸ್, ಪೊಲೀಸ್ ಅಧಿಕಾರಿಗಳೇ  ನೋಡಿ
WhatsApp Group Join Now
Telegram Group Join Now

ರಾಮದುರ್ಗ:-ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿರುವುದು ಒಂದೆಡೆಯಾದರೆ, ಇದಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಒಂದೆಡೆ ಆತಂಕಕಾರಿ ವಾತಾವರಣ ದೃಶ್ಯಗಳು ಸೃಷ್ಟಿಯಾಗುತ್ತಿದ್ದರೂ ಅಧಿಕಾರಿಗಳೇ ಇದಕ್ಕೆ ಸಾಥ್ ನೀಡುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ.ಹೌದು ಇದಕ್ಕೆ ಸಾಕ್ಷಿಯಾಗಿ ರಾಮದುರ್ಗ ಘಟಕ ಡಿಪೋದ ಬಸ್ ಒಂದರಲ್ಲಿ ಭಾರಿ ಪ್ರಮಾಣದ ಹೋಗೆ ಬಿಡುವ ದೃಶ್ಯ ಕಂಡುಬಂದಿತು .

ಸುರೇಬಾನದಿಂದ ರಾಮದುರ್ಗಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಬಸ್ ಒಂದರಲ್ಲಿ ಭಾರಿ ಪ್ರಮಾಣದ ಹೋಗೆ ಉಗುಳುತ್ತಿರುವದರಿಂದ ಬಸ್ ಹಿಂದೆ ಕಪ್ಪು ಮೋಡದ ರೂಪದ ಹೋಗೆ ಹೊರ ಬರುವ ದೃಶ್ಯವೊಂದು ಬಿವಿ 5 ನ್ಯೂಸ್ ಕ್ಯಾಮೆರಾದಲ್ಲಿ ಸೇರಿಯಾಗಿದೆ.ಇನ್ನು ಬಸ್ ನಿಂದ ಭಾರಿ ಪ್ರಮಾಣದಲ್ಲಿ ಹೋಗೆ ಬಿಡುತ್ತಿರುವದರಿಂದ ಜನರು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣ ಸೃಷ್ಟಿಯಾಗಿದೆ.

ಇಷ್ಟಲ್ಲದೆ ವಾಯುಮಾಲಿನ್ಯ ಹೆಚ್ಚಿಸುವದರಿಂದ ಜನರಿಗೆ ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಗುರಿಯಾಗುವ ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.ಇಷ್ಟೆಲ್ಲ ಅಪಾಯಕಾರಿ ತಂದೊಡ್ದುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಇದರ ಬಗ್ಗೆ ಗೊತ್ತು ಇಲ್ಲವೇನು? ಗೊತ್ತಿದ್ದರೂ ನಿದ್ರೆ ಮಾಡ್ತಿದ್ದಾರಾ? ಹೀಗೆ ಹಲವು ಪ್ರಶ್ನೆಗಳು ಗೋಚರಿಸುತ್ತವೆ. ಈಗಲಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಎನ್ನುವದನ್ನು ಕಾದು ನೋಡಬೇಕಿದೆ.

ವರದಿ: ಕುಮಾರ ಎಮ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!