ಚಿಕ್ಕೋಡಿ :-ಸದಲಗಾ ಪಟ್ಟಣದ ಪ್ರಾಚೀನ ವಿಠಲ ರುಕ್ಮಿಣಿ ಮಂದಿರದಲ್ಲಿ ಪ್ರತಿವರ್ಷದಂತೆ ಮೊಸರು ಮಡಿಕೆ ಒಡೆಯುವುದರೊಂದಿಗೆ ಮಹಾಪ್ರಸಾದ ಹಂಚಿ ಕಾರ್ತಿಕೋತ್ಸವ ಸಮಾರೋಪದ ಸಮಾರಂಭ ನಡೆಯಿತು. ಬೆಳಿಗ್ಗೆ ಮಂದಿರದಲ್ಲಿ ಮನೋಹರ್ ಜೋಶಿ ಅವರಿಂದ ವಿಟ್ಟಲ ರುಕ್ಮಿಣಿ ದೇವರಿಗೆ ಮಹಾಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ನಡೆಯುವ ಪ್ರತಿ ವರ್ಷದಂತೆ ಕುಂಬಳಕಾಯಿ ಪಲ್ಯ ಗೋಧಿ ಹುಗ್ಗಿ ಪ್ರಸಾದ ಸ್ವೀಕರಿಸಲು ಮುಂಬೈ ಪೋನ ಕೊಲ್ಲಾಪುರ್ ಬೆಳಗಾವಿ ಈಚಲಕರಂಜಿ ಸಾಂಗಲಿ,ಮಿರಜ ಪಟ್ಟಣಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ದೇವರಿಗೆ ಮಹಾಪೂಜೆಯ ನಂತರ ಶ್ರೀಗಳ ಪಾದದೊಂದಿಗೆ ಆರತಿ ಅಬ್ದಾಗಿರಿ, ತಾಳ ಮೃದಂಗಗಳ ವಾದ್ಯಗಳೊಂದಿಗೆ ನರ್ತಿಸುತ್ತಾ ದಿಂಡಿ ಹೊರಡಿಸಲಾಗಿತ್ತು. ಪಟ್ಟಣದ ಪ್ರಮುಖ ರಸ್ತೆಗಳಿಂದ ಸಾವಿರಾರು ಭಕ್ತರ ಮಧ್ಯೆ ಹಾಡು ನೃತ್ಯದೊಂದಿಗೆ ದೂದಗಂಗಾ ನದಿಗೆ ತೆರಳಿ ಅಲ್ಲಿ ಪೂಜಾ ಸಾಹಿತ್ಯಗಳನ್ನು ಸ್ವಚ್ಛಗೊಳಿಸಿ ಆರತಿ ಮಾಡಿ ಉಪಸ್ಥಿತರಿದ್ದ ಭಕ್ತರಿಗೆ ಪಂಚಾಮೃತ ಅಭಿಷೇಕ ಹಂಚಿ ಅಲ್ಲಿಂದ ಪುನಃ ಪಟ್ಟಣದ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಆಗಮಿಸಲಾಯಿತು. ನಂತರ ಸಾಯಂಕಾಲ ಮಹಾಪ್ರಸಾದ್ ದೊಂದಿಗೆ ಉತ್ಸವ ಮುಕ್ತಾಯಗೊಂಡಿತು. ಸದರಿ ಉತ್ಸವದಲ್ಲಿ ಸುತ್ತಲಿನ ಹತ್ತು ಹಳ್ಳಿಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವರದಿ:-ಮಹಾವೀರ ಚಿಂಚಣೆ.