ಬಾಗಲಕೋಟೆ: ಪ್ರಿಯಕರ ಕುಡಿದು ಬಂದ ವಿಚಾರವಗಿ ಪ್ರಿಯತಮೆ ಜಗಳವಾಡಿದ್ದಕ್ಕೆ ಮನ್ನೊಂದ ಯುವಕ ಆತ್ಮಹತ್ಯೆ ಮಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಅಜಯ್ (24) ಮೃತ ಯುವಕ. ಪ್ರೇಯಸಿ ಅನು ಜೊತೆ ಅಜಯ್ ಸ್ನೇಹಿತನ ಊರಾದ ನಿಂಗಾಪುರಕ್ಕೆ ತೆರಳಿದ್ದ.ಈ ವೇಳೆ ಸ್ನೇಹಿತ ನವೀನ್ ನನ್ನು ಭೇಟಿಯಾದ ವೇಳೆ ಅಜಯ್ ಆತನೊಂದಿಗೆ ಮದ್ಯ ಸೇವಿಸಿದ್ದ. ವಿಷಯ ತಿಳಿಯುತ್ತಿದ್ದಂತೆ ಪ್ರೇಯಸಿ ಅನು ಹುಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾಳೆ.
ಅಲ್ಲದೇ ಅಜಯ್ ಮೇಲೆ ಕೋಪ ಮಾಡಿಕೊಂಡು ಊರುಗೆ ವಾಪಾಸ್ ಆಗಿದ್ದಾಳೆ. ಈ ವೇಳೆ ಅಜಯ್ ವಿಡಿಯೋ ಕಾಲ್ ಮಾಡಿ ಬಿಟ್ಟು ಹೋದರೆ ಸಾಯುವುದಾಗಿ ಹೇಳಿದ್ದ. ಇದರಿಂದ ಆತಂಕಗೊಂಡ ಅನು ಮತ್ತೆ ಹಿಂತುರಿಗಿ ಬಂದಿದ್ದಳು. ಆದರೆ ಅಷ್ಟರಲ್ಲೇ ಅಜಯ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.