ಲಕ್ನೋ: ಲಕ್ನೋ ಸೂಪರ್ ಗೇಂಟ್ಸ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದಿಲ್ಲಿ ನಡೆಯುವ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಇಂದು ಸಾಯಂಕಾಲ 7:30 ಕ್ಕೆ ಪಂದ್ಯ ಆರಂಭವಾಗಲಿದ್ದು, ಸದ್ಯ 10 ಅಂಕಗಳನ್ನು ಗಳಿಸಿರುವ ದೆಹಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದೆ. ಇಷ್ಟೇ ಅಂಕಗಳನ್ನು ಗಳಿಸಿರುವ ಲಕ್ನೋ ಸೂಪರ್ ಗೇಂಟ್ಸ್ ರನ್ ಸರಾಸರಿ ಆಧಾರದ ಮೇಲೆ 5 ಸ್ಥಾನದಲ್ಲಿದೆ.