ಸಿಂಧನೂರು : ಮಾರ್ಚ್ 17ರಂದು ನಗರದ ಚೆನ್ನಮ್ಮ ಸರ್ಕಲ್ ನಲ್ಲಿ ಟ್ರೆಂಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ವತಿಯಿಂದ ಅಖಿಲ ಭಾರತ ಕಾರ್ಮಿಕ ಬೇಡಿಕೆ ದಿನವಾಗಿ ಆಚರಿಸಲು ಅಖಿಲ ಭಾರತ ಕರೆಯ ಮೇರೆಗೆ ಕರ್ನಾಟಕ ರಾಜ್ಯ ರಾಯಚೂರು ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಂ. ಗಂಗಾಧರ್ ರಾಜ್ಯ ಉಪಾಧ್ಯಕ್ಷರು ಟಿ ಯು ಸಿ ಐ, ಮಾತನಾಡಿ ಮಾರ್ಚ್ 17ರಂದು ಅಖಿಲ ಭಾರತ ಕಾರ್ಮಿಕರ ಬೇಡಿಕೆ ದಿನವಾಗಿ ಆಚರಿಸಲು ನಮ್ಮಯ ಆಗ್ರವಾಗಿದೆ ಹಾಗೂ ಲೇಬರ್ ಕೋಡ್ ಗಳನ್ನು ರದ್ದುಗೊಳಿಸಿ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಜಾರಿಗೆ ಮಾಡಬೇಕು ಮತ್ತು ಎಲ್ಲಾ ಕಾರ್ಮಿಕರಿಗೆ ತಿಂಗಳಿಗೆ 31,500 ರೂ ವೇತನ ಹೆಚ್ಚಿಸಿ ಗುತ್ತಿಗೆ ಕಾರ್ಮಿಕರ ಪದ್ಧತಿಯನ್ನು ರದ್ದುಪಡಿಸಿ ಮತ್ತು ಎಲ್ಲಾ ಕ್ಷೇತ್ರಗಳಿಗೆ ಸಮಾನ ವೇತನವನ್ನು ಖಚಿತಪಡಿಸಿ ವಲಸೆ ಕಾರ್ಮಿಕರಿಗೆ ಕಾನೂನು ರಕ್ಷಣೆಯನ್ನು ಒದಗಿಸಿ ಜೊತೆಗೆ ಗೂಳೇ ಕಾರ್ಮಿಕರ ನಿಯಂತ್ರಣ ಕಾಯ್ದೆ ಇದ್ದರೂ ಕೂಡ ದೇಶದ ಯಾವುದೇ ರಾಜ್ಯದಲ್ಲಿ ಇದರ ಅನುಷ್ಠಾನವಿಲ್ಲ ಲಕ್ಷ ಲಕ್ಷ ಜನ ಕಾರ್ಮಿಕ ಕುಟುಂಬಗಳು ಕೆಲಸಕ್ಕಾಗಿ ಸಾವಿರಾರು ಕಿಲೋಮೀಟರ್ ವಲಸೆ ಹೋಗುತ್ತಾರೆ . ಬಹುತೇಕ ವಲಸೆ ಕಾರ್ಮಿಕರಿಗೆ ಮಾಲೀಕರ ಅಟ್ಟಹಾಸ ದೌರ್ಜನ್ಯಕ್ಕೆ ಚಿತ್ರಹಿಂಸೆಗೆ ಅತ್ಯಾಚಾರ ಕೊಲೆಗಳಿಗೆ ಬಲಿಯಾಗುತ್ತಿದ್ದಾರೆ.
ಕಾರ್ಮಿಕರಿಗೆ ಉದ್ಯೋಗಿಗಳಿಗೆ ಕೆಲಸಗಾರರಿಗೆ ಕನಿಷ್ಠ ಜೀವನ ಭದ್ರತೆ ಒದಗಿಸಲು ಕೇಂದ್ರ ಸರಕಾರ ನಿರಕರಿಸಲಾಗಿದೆ ಕಾರ್ಮಿಕ ಶ್ರಮಶಕ್ತಿಯನ್ನು ಹಗ್ಗದ ದರದಲ್ಲಿ ಸುಲಿಗೆ ಮಾಡಿ ಸೂಪರ್ ಪ್ರಾಫಿಟ್ ಗಳಿಸುವ ವಿದೇಶಿ ಹಾಗೂ ಸ್ವದೇಶಿ ಕಾರ್ಪೊರೇಟರ್ ಕಂಪನಿಗಳಿಗೆ ಬಂಡವಾಳ ಶಾಹಿ ಮಾಲೀಕ ವರ್ಗಕ್ಕೆ ಕೂಲಿ ಗುತ್ತಿಗೆದಾರರಿಗೆ ಭಾರತವು ಭಾರವಾಗಿದೆ ಈ ಮೇಲಿನ ಆಗ್ರವನ್ನು ಮುಂದಿಟ್ಟು ಕೊಂಡು ಇಂದು ದೇಶಾದ್ಯಂತ ಟ್ರೆಂಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ವತಿಯಿಂದ ಸಿಂಧನೂರು ಉಪ ತಹಸೀಲ್ದಾರ್ ರವರ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮಾನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ – ಎಂ ಗಂಗಾಧರ್ ರಾಜ್ಯ ಉಪಾಧ್ಯಕ್ಷರು ಟಿ ಯು ಸಿ ಐ, ಎಚ್ ಆರ್. ಹೊಸಮನಿ ಜಿಲ್ಲಾ ಸಮಿತಿ ಸದಸ್ಯರು, ಹುಲುಗಪ್ಪ ಬಳ್ಳಾರಿ ತಾಲೂಕ ಅಧ್ಯಕ್ಷರು ಶಂಕರ್ ನಾಗ್ ಆಟೋ ಚಾಲಕರ ಸಂಘ, ಮುದಿಯಪ್ಪ ಹನುಮನಗರ ಕ್ಯಾಂಪ್, ಹನುಮಂತ ಗೊಂಡಿಹಾಳ, ಮಹಾರಾಜ್ ಯಮನೂರ ಮುದಿಯಪ್ಪ ರಾಜು ನಾಯಕ್ ಸಂಗಪ್ಪ ಆನಂದ ವೆಂಕಟೇಶ ರೆಡ್ಡಿ ಯಮನೂರು ಮುದಿಯಪ್ಪ ದುರ್ಗಪ್ಪ ಬಸವರಾಜ್ ಹನುಮಂತ ಹುಚ್ಚಪ್ಪ ಆಕಾಶ್ ಸೇರಿದಂತೆ ಇನ್ನಿತರರು ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ