ಸಿಂಧನೂರು : ಡಿ. 31 ನಗರದ ರಾಯಚೂರು, ಗಂಗಾವತಿ, ಕುಷ್ಟಗಿ, ಸುಕಲಪೇಟೆ, ರಸ್ತೆ ಸೇರಿದಂತೆ ಇತರೆ ರಸ್ತೆಗಳ ಪಕ್ಕದಲ್ಲಿ ಬೀದಿಬದಿ ವ್ಯಾಪಾರಸ್ಥರನ್ನು ತೆರವು ಗೊಳ್ಳಿಸಿದರಿಂದ ಅವರ ಜೀವನಕ್ಕೆ ಸಂಕಷ್ಟ ಎದುರಾಗಿದೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪುಟ್ ಪಾತ್ ಸರ್ಕಾರಿ ಸ್ಥಳಗಳಲ್ಲಿ ತಳ್ಳುವ ಬಂಡಿಗಳನ್ನು ಇಟ್ಟುಕೊಂಡು ಹಣ್ಣು ತರಕಾರಿ ಇತರೆ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸಲಿಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಿ ಶ್ರಮಜೀವಿ “ಬೀದಿಬದಿ ವ್ಯಾಪಾರಿಗಳ ಸಂಘ” ನಗರಸಭೆ ಕಚೇರಿ ಮುಂದೆ ಪ್ರತಿಭಟಿಸಿ ಪೌರಾಯುಕ್ತ ಮಂಜುನಾಥ್ ಎಂ. ಗುಂಡೂರು ಅವರಿಗೆ ಮನವಿ ಪತ್ರ ಸಲ್ಲಿಸಿ ಸಂಘದ ಗೌರವಾಧ್ಯಕ್ಷ ಎಂ. ಗಂಗಾಧರ ಮಾತನಾಡಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾರತೀಯ ಸಂವಿಧಾನ ಆರ್ಟಿಕಲ್ 19 (1) ಜಿ, ಪ್ರಕಾರ ನಾಗರೀಕನು ಬೀದಿಬದಿ ವ್ಯಾಪಾರ ಮಾಡಲು ಮೂಲಭೂತ ಹಕ್ಕು ಕೊಟ್ಟಿದೆ ಆದರೆ ತಾಲೂಕ ಆಡಳಿತದಿಂದ ಏಕಾಏಕಿ ತೆರವು ಗೊಳಿಸುವದನ್ನು ವಿರೋಧಿಸಿ ಪುಟ್ ಪಾತ್ ಮೇಲೆ ಸಣ್ಣಪುಟ್ಟ ತಳ್ಳುವ ಬಂಡಿ ಇಟ್ಟುಕೊಂಡು ಅದರಲ್ಲಿ ಹಣ್ಣು ತರಕಾರಿ ಹಾಗೂ ಇತರೆ ವಸ್ತುಗಳನ್ನು ಮಾರಿಕೊಂಡು ಬಂದ ಹಣದಲ್ಲಿ ಜೀವಿಸುವ ಜನರನ್ನು ಬದುಕಲು ಬಿಡಿ, ಹೈವೇ ರಸ್ತೆ ಕಬಳಿಸಿದ ಬಲಾಡ್ಯರ ಮಳೆಗೆಗಳನ್ನು ತೆರವುಗೊಳಿಸಿದೆ.
ಬೀದಿ ಬದಿ ವ್ಯಾಪಾರ ಮಾಡುವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬೇಡಿ ಸ್ಥಳಿಯ ಶಾಸಕರಾದ ಹಂಪನಗೌಡ ಬಾದರ್ಲಿ ಎಂಎಲ್ಸಿ ಬಸವನಗೌಡ ಬಾದರ್ಲಿ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಅವರು ಈ ಸಂದರ್ಭದಲ್ಲಿ ಮಾತನಾಡದೆ ಇರುವುದು ಸೋಜಿನೀಯವಾಗಿದೆ ಎಂದು ಖಂಡನೀಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ – ತಾಲೂಕಾಧ್ಯಕ್ಷ ದುರುಗಪ್ಪ ಭಜಂತ್ರಿ, ಉಪಾಧ್ಯಕ್ಷ ರಾದ ಭಾಷಾ ಸಾಬ್, ಹುಸೇನ್ ಸಾಬ್, ಹಾಗೂ ಸೋಮಶೇಖರ್, ಅಬ್ದುಲ್ ಸಾಬ್, ಜಾಹಿರ್ ಸಾಬ್, ನಾಶೀರ್ ಸಾಬ್, ಕಲಂದರ್, ಸೈಯದ್ ಅನ್ವರ್ ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ