ಬೆಂಗಳೂರು : ಇಂದು (ಮೇ 7) ದೇಶದ್ಯಾಂತ ಒಟ್ಟು 259 ಕಡೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಈ ಅಣಕು ಕವಾಯತು ನಡೆಯಲಿದ್ದು, ಯುದ್ಧದ ಸಂದರ್ಭದಲ್ಲಿ ಸೈರನ್ ಗಳ ಮಹತ್ವ, ಸ್ವಯಂ ರಕ್ಷಣೆ ,ವಾಯು ದಾಳಿಯಿಂದ ಪಾರಾಗುವ ಬಗೆ ಸೇರಿದಂತೆ ಹಲವು ವಿಚಾರಗಳನ್ನು ಅಣಕು ಕವಾಯತಿನ ಮೂಲಕ ಪ್ರದರ್ಶಿಸಲಾಗುತ್ತದೆ.
ಭಾರತದ ಪ್ರತಿ ರಾಜ್ಯಗಳಲ್ಲೂ ಸೇರಿದಂತೆ ಅಂಡಮಾನ್ ನಿಕೋಬಾರ್ ನ ಒಂದು ಪ್ರದೇಶದಲ್ಲೂ ಮಾಕ್ ಡ್ರಿಲ್ ನಡೆಯಲಿದೆ. ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡ ರಾಜ್ಯಗಳು, ಕರಾವಳಿಯ ಭಾಗ, ದೇಶದ ಮಹಾನಗರಗಳು,ಅಣುಸ್ಥಾವರ ಮತ್ತು ಇತರೆ ಮಹತ್ವದ ಇನ್ಫ್ರಾಸ್ಟ್ರಕ್ಚರ್ ಗಳಿರುವ ಕಡೆಗಳಲ್ಲಿ ಈ ಮಾಕ್ ಡ್ರಿಲ್ ನಡೆಸಲಾಗುತ್ತಿದೆ.
ಕರ್ನಾಟಕದಲ್ಲಿ ಒಟ್ಟು ಮೂರು ಕಡೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಮಾಕ್ ಡ್ರಿಲ್ ನಡೆಯಲಿದ್ದು, ಇನ್ನುಳಿದಂತೆ ಕಾರವಾರ ಜಿಲ್ಲೆ ಮತ್ತು ರಾಯಚೂರಿನ ಶಕ್ತಿ ನಗರದಲ್ಲಿ ಮಾಕ್ ಡ್ರಿಲ್ ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ.




