ಮೈಸೂರು : ಪಾಗಲ್ ಪ್ರೇಮಿಯೋರ್ವ ಪ್ರೀತಿಸುವಂತೆ ಅಪ್ರಾಪ್ತ ಬಾಲಕಿಯ ಬೆನ್ನು ಬಿದ್ದಿದ್ದು, ಇದರಿಂದ ಮನನೊಂದು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನಂಜನೂಡು ನೀಲಕಂಠ ನಗರದ ದಿವ್ಯ (17) ಎಂದು ಗುರುತಿಸಲಾಗಿದೆ.ದಿವ್ಯಾಳಿಗೆ ಆದಿತ್ಯ ಎಂಬಾತ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದನು. ಇದರಿಂದ ಬಾಲಕಿ ತೀವ್ರವಾಗಿ ನೊಂದಿದ್ದಳು.
ಆದಿತ್ಯ ಕಿರುಕುಳ ನೀಡುತ್ತಿರುವ ಬಗ್ಗೆ ಪೋಷಕರಿಗೆ ದಿವ್ಯಾ ವಿಷಯ ತಿಳಿಸಿದ್ದಳು. ಪೋಷಕರು ಆದಿತ್ಯನನ್ನು ಕರೆಸಿ ಬುದ್ದಿ ಮಾತು ಹೇಳಿ ಕಳುಹಿಸಿಕೊಟ್ಟಿದ್ದರು. ಇಷ್ಟಕ್ಕೆ ಸುಮ್ಮನಾಗದ ಆದಿತ್ಯ ಮತ್ತೆ ಮತ್ತೆ ದಿವ್ಯಾಗೆ ಕಿರುಕುಳ ನೀಡಿದ್ದಾನೆ.
ಇದರಿಂದ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿಯ ಪೋಷಕರು ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




