ಸಿಂಧನೂರು : ಹುಬ್ಬಳ್ಳಿ -ಧಾರವಾಡ ಜಿಲ್ಲೆಯಲ್ಲಿ ನಡೆದ ಗರ್ಭಿಣಿ ಮಹಿಳೆ ಮಾನ್ಯ ಪಾಟೀಲ್ ಪರಿಶಿಷ್ಟ ಜಾತಿ ಯುವಕನನ್ನು ಮದುವೆಯಾಗಿದ್ದಕ್ಕೆ ಅಮಾನುಷವಾಗಿ ಕೊಂದ ಮರ್ಯಾದಗೇಡು ಪ್ರಕರಣದ ಆರೋಪಿಗಳಿಗೆ ಉಗ್ರವಾದ ಶಿಕ್ಷೆ ನೀಡಬೇಕೆಂದು ತಾಶಿಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಸಮಿತಿಯ ಅಧ್ಯಕ್ಷ ವೆಂಕಟೇಶ್ ಗಿರಿಜಾಲಿ ತಿಳಿಸಿದರು.
ನಂತರ ಅವರು ಮಾತನಾಡಿ 22.12.2025 ರಂದು ಹುಬ್ಬಳ್ಳಿ- ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಮಿಯ್ಯಾ ವೀರಾಪುರ ಗ್ರಾಮದ ದಲಿತ ಯುವಕ ವಿವೇಕಾನಂದನನ್ನು ಅಂತರ್ಜಾತಿ ವಿವಾಹವಾಗಿರುವ ಮಾನ್ಯ ಪಾಟೀಲ್ “ಮರ್ಯಾದೆ ಹತ್ಯ” ಮತ್ತು ಹಾಕಿಯ ಗಂಡ ದಲಿತ ಯುವಕ ಸೇರಿದಂತೆ ಕುಟುಂಬದ ಮೇಲೆ ಮಾರಣಾಂತಿಕ ಅಲ್ಲೇ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸಿದಂತೆ ಜಾಗೃತಿ ವಹಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಶೋಕ್ ಮ್ಯಾಗಳ ಮನಿ. ವೀರೇಶ್ ಎನ್. ಉಪ್ಪಲದೊಡ್ಡಿ. ಪ್ರಧಾನ ಕಾರ್ಯದರ್ಶಿಗಳಾದ: ಗುರುರಾಜ ಮುಕುಂದ. ಹೆಚ್. ಸುಲಂಗಿ. ಹನುಮಂತಪ್ಪ ಹಂಪನಾಳ.
ಕಾರ್ಯದರ್ಶಿ ಕಾರ್ಯದರ್ಶಿ: ಪ್ರವೀಣ್ ಕುಮಾರ ಧುಮತಿ. ಖಜಾಂಚಿ : ಡಾ. ಸೋಮನಾಥ ಸುಲಂಗಿ. ಉಪ್ಪಳಪ್ಪ ಗಿಣಿವಾರ. ನಾಗರಾಜ ಹೆಡಗಿಬಾಳ. ಶಿವರಾಜ ಉಪ್ಪಲದೊಡ್ಡಿ. ಶಿವರಾಜ ಬಾಗಲವಾಡ. ನಾಗರಾಜ ಬಂಡಾರಿ. ಡಿ. ಮಾರುತಿ ಇನ್ನು ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ




