ಕಾಗವಾಡ: -ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ಪ್ರತಿಯೊಬ್ಬರ ಪಾತ್ರವೂ ಮುಖ್ಯವಾಗಿದೆ. ವಿಶೇಷವಾಗಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ಚಿಕ್ಕ ಮಕ್ಕಳಿಗೆ ಅಪೌಷ್ಟಿಕತೆ ಕೊರತೆಯಾಗದಂತೆ ಸರ್ಕಾರ ಈ ಪೋಷಣ ಅಭಿಯಾನದಂತಹ ಕಾರ್ಯಕ್ರಮಗಳನ್ನ ಜಾರಿಗೆ ತಂದಿದ್ದು, ವರ್ಷಪೂರ್ತಿ ಪೌಷ್ಟಿಕ ಆಹಾರ ಪೂರೈಕೆಯಾಗುವ ಕೆಲಸವಾಗಬೇಕು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹದೇವ್ ಕೋರೆ ಅವರು ಹೇಳಿದರು.
ಅವರು ಶುಕ್ರವಾರ ಮದಬಾವಿ ಗ್ರಾಮದ ಶ್ರೀ ಸಂತ ಹರಳಯ್ಯ ಸಮಾಜ ರಾಧಾಕೃಷ್ಣ ಮಂದಿರದಲ್ಲಿ ಆರೋಗ್ಯ ಇಲಾಖೆ, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಲಯ ಮಟ್ಟದ ರಾಷ್ಟ್ರೀಯ ಪೋಷಣ ಮಾಷಾಚರಣೆ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಡಾಕ್ಟರ್ ಜಿತೇಂದ್ರ ಬಿ ಎಂ ಅವರು ಮಾತನಾಡಿ ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳನ್ನು ಅಪೌಷ್ಟಿ ಕೊರತೆಯಿಂದ ದೂರ ಮಾಡಲು ಪೋಷಣ್ ಅಭಿಯಾನದಂತಹ ಕಾರ್ಯಕ್ರಮ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ. ಪೌಷ್ಟಿಕ ಆಹಾರ ಸೇವನೆ ಮತ್ತು ಅದರ ಉಪಯೋಗದ ಕುರಿತು ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ನಂತರ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಸನದಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಪೋಷಕಾಂಶವುಳ್ಳ ತರಕಾರಿ, ಹಾಲು, ಹಣ್ಣು, ದವಸ ಧಾನ್ಯಗಳನ್ನು ಸೇವಿಸಬೇಕು. ಪೋಷಕಾಂಶಗಳ ಆಹಾರವನ್ನು ಸೇವಿಸುವುದರಿಂದ ನಮ್ಮ ದೈಹಿಕ ಬೆಳವಣಿಗೆಗೆ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಂಜುಕುಮಾರ್ ಸದಲಗಿ ಅವರು ಅಭಿಯಾನದ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ, ಅಂಗನವಾಡಿ ಚಿಣ್ಣರ ಜನ್ಮದಿನ ಆಚರಣೆ,
ಮಕ್ಕಳಿಗೆ ಆಹಾರ ಪೋಷಣೆ ಕಾರ್ಯಕ್ರಮ ಸಾಂಕೇತಿಕವಾಗಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಕಾರಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಕಾಂಬಳೆ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಸವಿತಾ ಚೌಗಲಾ. ಕೃಷ್ಣ ಶಿಂದೆ. ದಾನೆಶ್ವರ್ ಬಂಡಾರೆ .ಅಶೋಕ್ ಗಾಡಿ ವಡ್ಡರ್ ದುಂಡಪ್ಪ ಬಾಡಗಿ. ತಮ್ಮಣ್ಣ ಭಂಡಾರೆ. ಹಿರಿಯ ಮೇಲ್ವಿಚಾರಕೀಯರು ಎಸ್ ಎಸ್ ಪಾಟೀಲ್. ಕಮಲ ಹಿರೇಮಠ್ ಪುಷ್ಪಾ ಗೊಂದಳೆ. ಪೂಜಾ ಮಠಪತಿ. ಅಶ್ವಿನಿ ಮಾಡಕರ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಸಿಬ್ಬಂದಿ ವರ್ಗ ಗರ್ಭಿಣಿ ಬಾನಂತಿಯರು ಮಕ್ಕಳು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ವರದಿ:-ಸುಕುಮಾರ್ ಮಾದರ