Ad imageAd image

ರಾಜ್ಯದ ಶಾಲೆಗಳಲ್ಲಿ ಎಐ ಬಳಕೆಗೆ ಚಿಂತನೆ : ಮಧು ಬಂಗಾರಪ್ಪ 

Bharath Vaibhav
ರಾಜ್ಯದ ಶಾಲೆಗಳಲ್ಲಿ ಎಐ ಬಳಕೆಗೆ ಚಿಂತನೆ : ಮಧು ಬಂಗಾರಪ್ಪ 
WhatsApp Group Join Now
Telegram Group Join Now

ಬೆಂಗಳೂರು : ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲೇ ಶೈಕ್ಷಣಿಕ ಹಾಗೂ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲು ಸಚಿವ ಮಧು ಬಂಗಾರಪ್ಪ ಹೊಸ ಮಾರ್ಗಸೂಚಿಯನ್ನು ರೂಪಿಸಿದ್ದಾರೆ

ಈ ಬಗ್ಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಈಗಿನಿಂದಲೇ ಎಐ ತಂತ್ರಜ್ಞಾನ ತರಲು ಪ್ರಯತ್ನಿಸಬೇಕು, ಆಗ ಮಾತ್ರ ಅವರು ದೊಡ್ಡವರಾದ ಮೇಲೆ ಈಗಿನ ತಂತ್ರಜ್ಞಾನದ ಬಗ್ಗೆ ಅಪಾರ ಅರಿವು ಮೂಡಿಸುತ್ತದೆ ಎಂದರು.

ನಾನು ಶಿಕ್ಷಣ ಮತ್ತು ಸಾಕ್ಷರತೆ ಸಚಿವನಾದಾಗ ರಾಹುಲ್ ಗಾಂಧಿ ಅವರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ರವಾನಿಸಲಾಗಿತ್ತು. ಆಗ ಇಂತಹ ಕಾರ್ಯವನ್ನು ಶಾಲೆಗಳಲ್ಲಿ ಮಾಡಬೇಕು ಎಂದು ಯೋಚಿಸಿದ್ದೆ, ಇದೀಗ ಈ ಬಗ್ಗೆ ತಾನೇ ಖುದ್ದಾಗಿ ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು.

ಮಕ್ಕಳಿಗೆ ಆರಂಭ ಹಂತದಲ್ಲೇ ಈ ರೀತಿಯ ಬಗ್ಗೆ ಜ್ಞಾನ ಮೂಡಿಸಿದರೆ ಭವಿಷ್ಯದಲ್ಲಿ ಸಹಾಯವಾಗುತ್ತದೆ. ಈ ಉಪಕ್ರಮದಲ್ಲಿ ನಮಗೆ ಸಹಾಯ ಮಾಡಲು ದೊಡ್ಡ ಕಂಪನಿಗಳು ಮುಂದೆ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.

ಹಾಗೆ ಮಕ್ಕಳಿಗೆ ಪ್ರಮಾಣಿತ ಬೋಧನಾ ಪ್ರಕ್ರಿಯೆಯ ಹೊರತಾಗಿ, ಎಐ ನಂತಹ ತಂತ್ರಜ್ಞಾನವನ್ನು ಮಕ್ಕಳಿಗೆ ವಿಭಿನ್ನ ದೃಷ್ಟಿಕೋನದಲ್ಲಿ ಕಲಿಯಲು ಸಹಾಯ ಮಾಡುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!