—————————————————ವನತಾರಾ ಸಂಸ್ಥೆಯ ಸಿ.ಇ.ಓ ವಿಹಾನ್ ಕುಲಕರ್ಣಿಭರವಸೆ
ನಿಪ್ಪಾಣಿ: ಕೊಲ್ಲಾಪುರ ಜಿಲ್ಲೆಯ ನಾಂದನಿ ಮಠದ ಜಿನಸೇನ ಭಟ್ಟಾರಕರು ಹಾಗೂ ವನತಾರಾ ಅಧಿಕಾರಿಗಳ ಪತ್ರಿಕಾ ಗೋಷ್ಠಿ ನಡೆದಿದ್ದು ಅನಂತ ಅಂಬಾನಿಯವರು ಸದ್ಯ ನಿರ್ಣಯ ಕೈಗೊಂಡಿದ್ದು ನಾಂದನಿ ಮಠದ ಮಾಧುರಿ ಆನೆಗೆ ದುಃಖ ನೀಡಬೇಕೆಂಬ ಭಾವನೆ ಇಲ್ಲ.ವನತಾರಾದಲ್ಲಿ ಅದಕ್ಕೆ ಒಳ್ಳೆಯ ಕಾಳಜಿ ಪೂರ್ವಕ ಸೌರಕ್ಷಣೆ ಹಾಗೂ ಉಪಚಾರ ನೀಡಲಾಗುತ್ತಿದ್ದು ನಾಂದನಿ ಮಠದಲ್ಲೂ ಉತ್ತಮ ಪ್ರಚಾರದೊಂದಿಗೆ ಸಂರಕ್ಷಣೆ ಕೇಂದ್ರ ಸ್ಥಾಪಿಸಲಾಗುವುದು ಎಂದು ಒನತಾರಾ ಸಿ ಈ ಓ ವಿಹಾನ್ ಕುಲಕರ್ಣಿ ತಿಳಿಸಿದ್ದಾರೆ.
ಇದಕ್ಕಾಗಿ ಕಾಯ್ದೆಯ ಪ್ರಕಾರ ದಾಖಲೆಗಳನ್ನು ನೀಡಿ ಆದಷ್ಟು ಬೇಗ ನಾಂದನಿ ಮಠಕ್ಕೆ Shop ಕೊಲ್ಲಾಪುರ್ ಜನತೆಗೆ ಆನೆಯನ್ನು ಹಿಂದಿರುಗಿಸಲಾಗುವುದೆಂದು ತಿಳಿಸಿದರು. ಇದೇನೂ ಈಗೋ ಪ್ಯಾಟೆಲ. ಅಲ್ಲ.. ಇದು ಆನೆಯ ಜೀವ ರಕ್ಷಣೆಯಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ನಾಂದನಿ ಮಠದ ಜಿನ ಸೇನ್ ಭಟ್ಟಾರಕರು ಮಾತನಾಡಿ ನಾಂದನಿ ಮಠ, ಮಹಾರಾಷ್ಟ್ರ ಸರ್ಕಾರ, ಹಾಗೂ ವನತಾರಾ ಸಂಯುಕ್ತ ಆಶ್ರಯದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ರಿವ್ಯೂ ಪೆಟೀಷನ್ ಯಾಚಿಕೆ ದಾಖಲಿಸುವ ನಿರ್ಣಯವಾಗಿದ್ದು ನಾಂದನಿ ಮಠದ ಮಾಲಕೀಯ ಜಾಗದಲ್ಲೇ ವಣ ತಾರಾ ಸಂಸ್ಥೆ ಆನೆಯ ಪಾಲನೆ, ಪೋಷಣೆಯ ಜೊತೆಗೆ ಸಕಲ ಸೌಲಭ್ಯಗಳೊಂದಿಗೆ ಕೇಂದ್ರ ನಿರ್ಮಿಸುವ ಜವಾಬ್ದಾರಿ ಹೊತ್ತಿದ್ದು ಆನೆಯ ಕುರಿತು ಸುಪ್ರೀಂ ಕೋರ್ಟ್ ದ ನಿರ್ಣಯ ಬಂದ ನಂತರ ಆನೆಯ ಸಂಪೂರ್ಣ ಜವಾಬ್ದಾರಿ ನಾಂದಣಿ ಮಠಕ್ಕೆ ವಹಿಸಲಾಗಿದ್ದು ಆನೆಯ ಉಪಚಾರ ವೈದ್ಯಕೀಯ ಸೇವೆಯ ಪಥಕ ವನ್ನು ಸ್ವತ ವನತಾರಾ ವಹಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಸುದ್ದಿಗೊಸ್ಥಿಯಲ್ಲಿ ಸಂಸದ್ ಧೈರ್ಯ ಶೀಲ ಮಾನೆ, ಮಾಜಿ ಶಾಸಕ ಪ್ರಕಾಶ ಅವಾಡೆ, ಶಾಸಕ ರಾಜೇಂದ್ರ ಪಾಟೀಲ, ಮಾಜಿ ಸಂಸದ ರಾಜು ಶೆಟ್ಟಿ ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




