ಅರಸಿಕೆರೆ : ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕೆಂದು ಮಾರ್ಚ್ 16 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಹೋರಾತ್ರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ, ಈ ಪ್ರತಿಭಟನೆಗೆ ತಾಲೂಕಿನ ಮಡಿವಾಳ ಸಮಾಜದ ಸಮಸ್ತ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಅರಸೀಕೆರೆ ತಾಲೂಕು ಶ್ರೀ ಮಡಿವಾಳ ಮಾಚಿದೇವ ಸಂಘದ ನಿರ್ದೇಶಕ ಷಡಕ್ಷರಿ ನರಸೀಪುರ ಮನವಿ ಮಾಡಿದ್ದಾರೆ.
ದೇಶದ 18 ರಾಜ್ಯಗಳಲ್ಲಿ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮಾಜ ಈಗಾಗಲೇ ಎಸ್ ಸಿ ಪಟ್ಟಿಯಲ್ಲಿದ್ದು, ದುರಾದೃಷ್ಟ ರಾಜಕಾರಣದ ಬಲ ಸಾಮಾಜಿಕವಾಗಿ ಹಿನ್ನಡೆ ಹಾಗೂ ಆರ್ಥಿಕವಾಗಿ ಹಿನ್ನಡೆ ಹೊಂದಿರುವ ಮಡಿವಾಳ ಸಮಾಜ ಕರ್ನಾಟಕದಲ್ಲಿ ಇದುವರೆಗೂ ಆಳ್ವಿಕೆ ಮಾಡಿದ ಯಾವ ಪಕ್ಷವಾಗಲಿ ಯಾವ ಸರ್ಕಾರವಾಗಲಿ ಇಂದಿಗೂ ಮೀಸಲಾತಿ ನೀಡದೆ ಕೇವಲ ಚುನಾವಣಾ ಸಂದರ್ಭದಲ್ಲಿ ಮತಗಳಿಗೋಸ್ಕರ ಸಮಾಜವನ್ನು ಬಳಸಿಕೊಂಡು ಸಮಾಜಕ್ಕೆ ಸಣ್ಣಪುಟ್ಟ ಆಶ್ವಾಸನೆಗಳನ್ನು ನೀಡುತ್ತಾ ವಂಚಿಸಿರುವುದು ಇಡೀ ಮಡಿವಾಳ ಸಮಾಜಕ್ಕೆ ಇಡೀ ಶಾಪವಾಗಿ ಪರಿಣಮಿಸಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪನವರು ರಾಜ್ಯದ ಮಡಿವಾಳ ಸಮಾಜವನ್ನು ಕುಲಶಾಸ್ತ್ರ ಅಧ್ಯಯನ ಮಾಡಲು ಡಾ. ಅನ್ನಪೂರ್ಣ ಅವರನ್ನು ನೇಮಕ ಮಾಡಿತ್ತು, ಮಡಿವಾಳ ಸಮಾಜದ ಕುಲಶಾಸ್ತ್ರ ಅಧ್ಯಯನ ಮತ್ತು ಸಂಶೋಧನೆಯನ್ನು ಮಾಡಿದ ಅನ್ನಪೂರ್ಣನವರು ಮಡಿವಾಳ ಸಮಾಜ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ಆರ್ಥಿಕವಾಗಿ ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಜಾತಿಗೆ ಮೊದಲು ಆದ್ಯತೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಿ.
ಈ ಸಮಾಜವನ್ನು ಇದುವರೆಗೂ ಏಕೆ ಪರಿಶಿಷ್ಟ ಜಾತಿಗೆ ಸೇರಿಸಿಲ್ಲ ಎಂಬುದು ವರದಿಯ ತಿರುಳಾಗಿತ್ತು.
ಇದೀಗ ಮಡಿವಾಳ ಸಮಾಜ ಎಚ್ಚೆತ್ತುಕೊಂಡು ನಮಗೆ ಸಿಗಬೇಕಾದ ಹಕ್ಕನ್ನು ಪಡೆದುಕೊಳ್ಳಲು ಜನಾಂಗ ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಘಟನೆಗೊಂಡು ಹೋರಾಟಕ್ಕೆ ಅಣಿಯಾಗಿದೆ ಇದೇ ಮಾರ್ಚ್ 16ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಉತ್ತರ ಕರ್ನಾಟಕ ಮಡಿವಾಳರ ಸಂಘ ಸಹಯೋಗದೊಂದಿಗೆ ಲಿಂಗೈಕ್ಯ ಜಗ್ವದ್ಗುರು ಶ್ರೀ ಶ್ರೀ ಮಾಚಿದೇವ ಯೋಗಾನಂದ ಪುರಿ ಮಹಾಸ್ವಾಮೀಜಿ ಇವರ ಆಶೀರ್ವಾದದೊಂದಿಗೆ ಜಗದ್ಗುರು ಡಾ. ಶ್ರೀ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಜಗದ್ಗುರು ಶ್ರೀ ಮಾಚಿದೇವ ಮಹಾ ಸಂಸ್ಥಾನ ಮಠ ಚಿತ್ರದುರ್ಗ ಹಾಗೂ ಮುಕ್ತಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಕರಿಂಜೆ ಮೂಡಬಿದ್ರೆ ಇವರುಗಳ ದಿವ್ಯ ಸಾನಿಧ್ಯ ಹಾಗೂ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಗೆ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆ ತಾಲೂಕು ಗ್ರಾಮ ಗ್ರಾಮಗಳಿಂದ ಮಡಿವಾಳ ಸಮಾಜದವರು ಭಾಗವಹಿಸಲಿದ್ದು
ಸಮಾಜದ ಮುಖಂಡರುಗಳಾದ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷರಾದ ಆರ್ ರಘು ಕೌಟಿಲ್ಯ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ರಾಜು ತಲ್ಲೂರ್ ಹಾಗೂ ಸಮಾಜಸೇವಕರಾದ ತರೀಕೆರೆ ಗೋಪಿಕೃಷ್ಣರವರು ಇನ್ನೂ ಮುಂತಾದ ಸಮಾಜದ ಮುಖಂಡರು ಹೋರಾಟದಲ್ಲಿ ಭಾಗವಿಸಲಿದ್ದಾರೆ ಎಂದರು.
ವರದಿ : ರಾಜು




