ಚಿಕಿತ್ಸೆಗಾಗಿ ಬಂದ ವ್ಯಕ್ತಿಗೆ ಯಾವುದೇ ರೀತಿಯ ಸ್ಕ್ಯಾನಿಂಗ್ ಮತ್ತು X Ray ಮಾಡದೆ ಆಪರೇಷನ್ ಮಾಡಿದ kle ಆಸ್ಪತ್ರೆ ವೈದ್ಯ ಡಾ. ಸ್ಟಾಲಿನ್ ಹೆಗ್ರೆ. ಕೊಬ್ಬಿನ ಗಂಟು ಇದೆ 30 ನಿಮಿಷದಲ್ಲಿ ನಾನೇ ತೆಗೆಯುತ್ತೇನೆ ಅಂತ ಹೇಳಿ ಆಮೇಲೆ ಆಪರೇಷನ್ ಮಾಡಲು ಹೋದಾಗ ಆಮೇಲೆ ಅದು ರಕ್ತದ ಗಂಟು ಅಂತ ಹೇಳಿ ಹೊರ ತೆಗೆಯದೆ ಅಲ್ಲೇ ಇಟ್ಟು 4 ಹೊಲಿಗೆ ಹಾಕಿರುತ್ತಾನೆ ಅದೇ ದಿನ ಅರ್ಧ ಗಂಟೆಯಲಿ ಡಿಸ್ಚಾರ್ಜ್ ಮಾಡಿ ಯಾವದೇ ರೀತಿ ದಾಖಲೆ ಇಲ್ಲದೆ ಕಳಿಸುತ್ತಾನೆ. ಯಾವದೇ ರೀತಿಯ ಡಿಸ್ಚಾರ್ಜ್ ಸಮ್ಮರಿ ಕೊಟ್ಟಿರುವುದಿಲ್ಲ. ಗಂಟು ಕೂಡ ತೆಗೆದಿಲ್ಲ ಹೀಗಾಗಿ ಅನೇಕ ಸಂಘಟನೆಗಳಿಂದ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದಕ್ಕೆ ಕಾರಣ ಕೇಳಿದಕ್ಕೆ ಆಸ್ಪತ್ರೆಯ CEO ಪ್ರಶಾಂತ ದೇಸಾಯಿ ಮತ್ತು medical superintendent ಸಂಜಯ್ ಕಂಬಾರ ಉಡಾಫೆ ಉತ್ತರ ನೀಡುತ್ತಿದ್ದಾರೆ.
ವರದಿ : ಮಹಾಂತೇಶ್ ಎಸ್ ಹುಲ್ಲಿಕಟ್ಟಿ




