ನವದೆಹಲಿ : ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಹದಾಯಿ ಕಳಸಾ ನಾಲಾ ತಿರುವು ಯೋಜನೆಗೆ ಸಂಬಂಧಿಸಿ ಅನುಮೋದನೆ ನೀಡುವಂತೆ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಇತ್ತೀಚೆಗೆ ಯೋಜನೆಗೆ ಅನುಮೋದನೆ ನೀಡುವ ಪ್ರಸ್ತಾವನೆಯ ಕಾರ್ಯಸೂಚಿಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಮುಂದೂಡಿತ್ತು.ಇದರ ಬೆನ್ನಲ್ಲೇ ಡಿಸಿಎಂ ಅವರು ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾಗಿದ್ದಾರೆ.
ಈ ಮೊದಲು ಮಹದಾಯಿ ಯೋಜನೆಗೆ ಅನುಮತಿ ಬಗ್ಗೆ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ನಿರ್ದೇಶಿಸಿತ್ತು. ಆದ್ದರಿಂದ ವನ್ಯಜೀವಿ ಅನುಮೋದನೆ ನೀಡುವ ಪ್ರಕ್ರಿಯೆಯೂ ಮಗದೊಮ್ಮೆ ವಿಳಂಬವಾಗಿದೆ.
ಅ.9ರಂದು ಸ್ಥಾಯಿ ಸಮಿತಿ ಸಭೆ ಮಾಡಿದ್ದಾಗ, ಗೋವಾ, ಕರ್ನಾಟಕ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳ ಅಭಿಪ್ರಾಯ ಆಲಿಸಿದ್ದ ನಂತರ, ಕಾರ್ಯಸೂಚಿ ಮುಂದೂಡಲು ಸಮಿತಿ ನಿರ್ಧಾರ ಮಾಡಿತ್ತು. ಅ.10 ಹಾಗೂ 16ರಂದು ರಾಜ್ಯ ಸರ್ಕಾರ ಅಗತ್ಯ ವಿವರಣೆಯನ್ನೂ ಸಲ್ಲಿಕೆ ಮಾಡಿತ್ತು.