Ad imageAd image

ಮೂವತ್ತು ದಿನಗಳ ಅಂತರದಲ್ಲಿ 2.24 ಕೋಟಿ ರೂ ಅಧಿಕ ಆಧಾಯ ತಂದ ಮಹದೇಶ್ವರ ಬೆಟ್ಟ

Bharath Vaibhav
ಮೂವತ್ತು ದಿನಗಳ ಅಂತರದಲ್ಲಿ 2.24 ಕೋಟಿ ರೂ ಅಧಿಕ ಆಧಾಯ ತಂದ ಮಹದೇಶ್ವರ ಬೆಟ್ಟ
WhatsApp Group Join Now
Telegram Group Join Now

ಚಾಮರಾಜನಗರ :– ಮೂವತ್ತು ದಿನಗಳ ಅಂತರದಲ್ಲಿ ಎರಡು ಕೋಟಿ ಇಪ್ಪತ್ತನಾಲ್ಕು ಲಕ್ಷ ಮೂವತ್ತಾರು ಸಾವಿರದ ಮುನ್ನೂರು ಅರವತ್ಮೂರು ರೂಪಾಯಿಗಳ ಕಾಣಿಕೆ ಸಂಗ್ರಹದೊಂದಿಗೆ ಬೃಹತರ್ ಮೊತ್ತದ ಆದಾಯ ಬಂದಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಶ್ರೀಮಂತ ದೇವಾಲಯದ ಸಾಗಿನೆಡೆಗೆ ಸಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಾಲೂರು ಬೃಹನ್ಮಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ಗಳ ದಿವ್ಯಸಾನಿದ್ಯದಲ್ಲಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಎ. ಈ, ರವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ ಎರಡು ಕೋಟಿ ಇಪ್ಪತ್ತು ಲಕ್ಷದ ತೊಂಭತ್ತೇಳು ಸಾವಿರದ ಐನೂರ ಮೂವತ್ಮೂರು ರೂಗಳು ನಗದು ಹಾಗೂ ಇ-ಹುಂಡಿಯಲ್ಲಿ ಮೂರು ಲಕ್ಷದ ಮೂವತ್ತೆಂಟು ಸಾವಿರದ ಎಂಟು ನೂರು ಮೂವತ್ತು ರೂ ಸೇರಿ ಎರಡು ಕೋಟಿ ಇಪ್ಪತ್ತನಾಲ್ಕು ಲಕ್ಷ ಮೂವತ್ತಾರು ಸಾವಿರದ ಮುನ್ನೂರು ಅರವತ್ಮೂರು ರೂಪಾಯಿಗಳ ಕಾಣಿಕೆ ಸಂಗ್ರಹವಾಗಿದೆ.

ಕಾಣಿಕೆಯೊಂದಿಗೆ 106 ಗ್ರಾಂ. ಚಿನ್ನ , ಎರಡು ಕೆಜಿ ನೂರು ಗ್ರಾಂ ಬೆಳ್ಳಿ ಆಭರಣಗಳು ಹುಂಡಿಯಲ್ಲಿ ದೊರೆತಿದೆ. ಹಾಗೂ ಆರು ವಿದೇಶಿ ನೋಟುಗಳಲ್ಲಿ ಮೂರು ಡಾಲರ್, ಅರಬ್, ನೇಪಾಳ ಹಾಗೂ ಉಮೇನ್ ದೇಶದ ತಲಾ ಒಂದೊಂದು ನೋಟು ಸಂಗ್ರಹವಾಗಿದೆ. ಅದೂ ಅಲ್ಲದೆ ಎರಡು ಸಾವಿರ ಮುಖ ಬೆಲೆಯ 19 ನೋಟುಗಳು ಸಹ ಹುಂಡಿಯಲ್ಲಿ ಕಾಣಿಕೆಯಾಗಿ ಭಕ್ತರು ಹಾಕಿದ್ದಾರೆ

ಹುಂಡಿ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್, ಚಾಮರಾಜನಗರ ಜಿಲ್ಲಾಡಳಿತ ಕಛೇರಿಯ ಕು.ಮಧುಶ್ರಿ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಬ್ಯಾಂಕ್ ಆಪ್ ಬರೋಡ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!