ಶಿರೋಳ: ಮಹಾರಾಷ್ಟ್ರದಲ್ಲಿ ಮಹಾದೇವಿ ಆನೆ ವಿಷಯ ತುಂಬಾ ಚರ್ಚೆಗೆ ಗ್ರಾಸವಾಗಿದೆ. ಮಹಾದೇವಿ ಆನೆಗೆ ಶಿರೋಳದ ಜನ ಮಾಧುರಿ ಎಂತಲೂ ಕರೆಯುತ್ತಾರೆ. ಮಾಧುರಿ ಸದ್ಯ ರಿಲ್ಯಾಯನ್ಸ್ ಇಂಡಸ್ಟ್ರೀಜ್ ಮತ್ತು ರಿಲ್ಯಾಯನ್ಸ್ ಪೌಂಡೇಶನ್ ಗೆ ಸೇರಿದ ವಂತಾಲ್ ಅನಿಮುಲ್ ರೆಸ್ಕ್ಯೂ ಸೆಂಟರ್ ಗೆ ಸೇರಿಸಲಾಗಿದ್ದು, ಆನೆಯನ್ನು ಮತ್ತೇ ಶಿರೋಳ ತಾಲೂಕಿನ ನಾಂದಿನಿ ಗ್ರಾಮದ ಜೈನ ಮಠಕ್ಕೆ ಕರೆದುಕೊಂಡು ಬರುವ ವ್ಯವಸ್ಥೆ ಬಲು ಜೂರಿನಿಂದ ಸಾಗಿದೆ.
ರಿಲ್ಯಾಯನ್ಸ್ ಪೌಂಡೇಶನ್ ಗೆ ಸೇರಿದ ಕೇಂದ್ರಕ್ಕೆ ಮಾಧುರಿಯನ್ನು ಕಳಿಸಿದ್ದರಿಂದ ಶಿರೋಳದ ಜನರು ರಿಯಾಲಯನ್ಸ್ ಮೇಲೆ ಕೋಪಗೊಂಡಿದ್ದು, ರಿಲ್ಯಾಯನ್ಸ್ ಮೊಬೈಲ್ ಕನೆಕ್ಸನ್ ಗಳನ್ನು ಬೇರೆ ಬೇರೆ ಕಂಪೆನಿಗಳಿಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ವಿಷಯ ಶಿರೋಳದಲ್ಲಿ ಭಾರೀ ಸುದ್ದಿ ಮಾಡಿದ್ದು, ಜನರು ಆರಂಭದಲ್ಲಿ ರೆಸ್ಕ್ಯೂ ಸೆಂಟರ್ ಗೆ ಕಳುಹಿಸಲು ನಿರಾಕರಿಸಿದ್ದರು.
ಆದರೆ ನಂತರ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶದ ನಂತರ ಮಾಧುರಿಯನ್ನು ರೆಸ್ಕ್ಯೂ ಕೇಂದ್ರಕ್ಕೆ ಕಳುಹಿಸಿಕೊಡಲು ಜನರು ಭಾರವಾದ ಮನಸ್ಸಿನಿಂದ ಕಳುಹಿಸಿಕೊಟ್ಟಿದ್ದರು. ಈ ವಿಷಯ ಮಹಾರಾಷ್ಟ್ರದಲ್ಲಿ ತುಂಬಾ ಚರ್ಚೆಗೆ ಗ್ರಾಸವಾಗಿದ್ದು, ಮಹಾರಾಷ್ಟ್ರದ ಆರೋಗ್ಯ ಸಚಿವರಿಂದಲೂ ಮಹಾರಾಷ್ಟ್ರ ಸಿಎಂ ರಿಂದಲೂ ಚರ್ಚೆಗೊಳಗಾಗಿದೆ.




