Ad imageAd image

ಸರ್ಕಾರಿ ಶಾಲೆಗಳ ಸೌಲಭ್ಯಗಳನ್ನು ಬಳಸಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ:ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಕ್

Bharath Vaibhav
ಸರ್ಕಾರಿ ಶಾಲೆಗಳ ಸೌಲಭ್ಯಗಳನ್ನು ಬಳಸಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ:ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಕ್
WhatsApp Group Join Now
Telegram Group Join Now

ನಿಪ್ಪಾಣಿ :ಸರ್ಕಾರಿ ಶಾಲೆಗಳ ಸೌಲಭ್ಯಗಳನ್ನು ಬಳಸಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ ಗಳತಗಾ ಶತಮಾನೋತ್ಸವ ಶಾಲೆಯ ಪ್ರಾರಂಭೋತ್ಸವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಕ್ ಸಲಹೆ.

ಸುಸಜ್ಜಿತ ಕಟ್ಟಡ, ಹೈಟೆಕ್ ಶೌಚಾಲಯ, ಉಚಿತ ಕಂಪ್ಯೂಟರ್ ಹೂದೋಟ ಸಾಮಗ್ರಿಗಳು, ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಶೈಕ್ಷಣಿಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಸರಕಾರಿ ಶಾಲೆಗಳ ಸೌಲಭ್ಯಗಳನ್ನು ಬಳಸಿ ಮಕ್ಕಳನ್ನು ಶಾಲೆಗೆ ದಾಖಲಿಸಿ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಮಹಾದೇವಿ ನಾಯಕ್ ಸಲಹೆ ನೀಡಿದರು. ಅವರು ನಿಪ್ಪಾಣಿ ತಾಲೂಕಿನಲ್ಲಿಯ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಯ ಪಿಎಂಶ್ರೀ ಗೆ ಆಯ್ಕೆಯಾದ ಗಳತಗಾ ಶತಮಾನೋತ್ಸವ ಹಿರಿಯ ಕನ್ನಡ ಮರಾಠಿ ಉರ್ದು ಪ್ರಾಥಮಿಕ ಶಾಲೆಯು ಏರ್ಪಡಿಸಿದ್ದ 2025 26ನೇ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಪ್ರಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವಿ ನಾಯಕ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಲಗೌಡ ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತಿಯಲ್ಲಿ ವಿವಿಧ ವಾದ್ಯದೊಂದಿಗೆ ಶತಮಾನೋತ್ಸವ ಶಾಲೆಗೆ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಮಕ್ಕಳಿಗೆ ಪುಷ್ಪ ನೀಡಿ ಬರಮಾಡಿಕೊಂಡರು. ವೇದಿಕೆಯಲ್ಲಿಯ ಗಣ್ಯರಿಂದ ದೀಪ ಪ್ರಜ್ವಲ್ ನೆಯ ನಂತರ ಮಕ್ಕಳಿಗೆ ಯೂನಿಫಾರ್ಮ್ ಬ್ಯಾಗ್ ವಿತರಿಸಲಾಯಿತು ಈ ಸಂದರ್ಭದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಡಿಸಿ ವಾಕ್ಪಟ್ಟೆ ಕಾಗೆ ಸರ್ ಮಾತನಾಡಿದರು.

ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀಮತಿ ಲಕ್ಕವ್ವ ಹುಣಸೆ HDMC ಅಧ್ಯಕ್ಷ ಪಾಂಡು ಹಿರವೆ ಎಸ್ ಎ ಗೋರವಾಡೆ ಶ್ರೀಮತಿ ನಿಕಮ್ ಮೇಡಂ ಎಲ್.ಎಸ್. ಕಂಬಾರ ಸೇರಿದಂತೆ ಶೀಲಂಗನಮರಡಿ, ಹಳ ದಟ್ಟಿ, ಭಿಮಾಪೂರವಾಡಿ ಪ್ರಾಥಮಿಕ ಕನ್ನಡ ಮರಾಠಿ ಉರ್ದು ಶಾಲೆಗಳ ಮುಖ್ಯೋಪಾಧ್ಯಾಯರು ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಎಂ.ವೈ ಗೋಕಾರ್ ಸ್ವಾಗತಿಸಿದರು ಏ ಎಂ ಕಬಾಡಗಿ ನಿರೂಪಿಸಿ ಎಸ್.ಪೀ. ಕರಂಗಳೇ ವಂದಿಸಿದರು

ವರದಿ:ಮಹಾವೀರ ಚಿಂಚಣೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!