ಪಾಟ್ನಾ: ಸದಾ ಒಂದ್ದಲ್ಲೊಂದು ಹೇಳಿಕೆಯಿಂದ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದ್ದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಮಹಾಕುಂಭ ಮೇಳವನ್ನು “ಅರ್ಥಹೀನ” ಎಂದು ಕರೆಯುವ ಮೂಲಕ ಲಾಲು ಪ್ರಸಾದ್ ಯಾದವ್ ಹೊಸ ವಿವಾದವನ್ನು 18 ಮಂದಿ ಪ್ರಾಣ ಕಳೆದುಕೊಂಡ ದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತಕ್ಕೆ ರೈಲ್ವೆ ಇಲಾಖೆಯನ್ನು ದೂಷಿಸುವ ಎಂದು ಹೇಳಿಕೆ ನೀಡಿದ್ದಾರೆ.
ಕಾಲ್ತುಳಿತಗಳು ತುಂಬಾ ಸಮಸ್ಯೆಯಾಗಿದ್ದು ಈ ಘಟನೆಯ ನಂತರ ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು. ಇದು ರೈಲ್ವೆಯ ಸಂಪೂರ್ಣ ವೈಫಲ್ಯ ಎಂದು ಕಿಡಿ ಕಾರಿದರು.
ಲಾಲು ಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಹಾರ ಬಿಜೆಪಿ ವಕ್ತಾರ ಮನೋಜ್ ಶರ್ಮಾ, ಇದು ಹಿಂದೂ ಧರ್ಮದ ಬಗ್ಗೆ ಆರ್‌ಜೆಡಿಯ ಮನಸ್ಥಿತಿಯನ್ನು ಬಹಿರಂಗಪಡಿಸಿದೆ.ಆರ್‌ಜೆಡಿ ನಾಯಕರು ಯಾವಾಗಲೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಕಿಡಿ ಕಾರಿದರು.