Ad imageAd image

ಆರ್ ಕೆ ಮೆಟಲ್ ಫಿನ್ನಿಷ್ಸ೯ನ ಕಂಪನಿಯಲ್ಲಿ ಆಯುಧ ಪೂಜೆ,ದಸರಾ ಹಬ್ಬದ ಪ್ರಯುಕ್ತ ಮಹಾಲಕ್ಷ್ಮೀ ಪೂಜಾ ಮಹೋತ್ಸವ

Bharath Vaibhav
ಆರ್ ಕೆ ಮೆಟಲ್ ಫಿನ್ನಿಷ್ಸ೯ನ ಕಂಪನಿಯಲ್ಲಿ ಆಯುಧ ಪೂಜೆ,ದಸರಾ ಹಬ್ಬದ ಪ್ರಯುಕ್ತ ಮಹಾಲಕ್ಷ್ಮೀ ಪೂಜಾ ಮಹೋತ್ಸವ
WhatsApp Group Join Now
Telegram Group Join Now

ಬೆಂಗಳೂರು : -ಈಗಿನ ತಂತ್ರಜ್ಞಾನ ಯುಗದಲ್ಲಿ ಹಬ್ಬ ಹರಿದಿನಗಳು ಮರೆಮಾಚಿ ಹೋಗುವ ಕಾಲಘಟ್ಟದಲ್ಲಿ ನಾವು ಇದ್ದೇವೆ ಎಂಬುದನ್ನು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗನಹಳ್ಳಿ ವಾರ್ಡಿನ ಜೆಡಿಎಸ್ ಪ್ರಭಾವಿ ಮುಖಂಡ ಹಾಗೂ ಆರ್ ಕೆ ಮೆಟಲ್ ಫಿನ್ನಿಷ್ಸ೯ನ ಕಂಪನಿ ಮಾಲೀಕರಾದ ಆರ್ ಕೆ ಕುಮಾರ್ ಅವರು ಹೇಳಿದರು.

ಅವರು ನವರಾತ್ರಿಯ ಏಳನೇ ದಿನದಿಂದ ಪವಿತ್ರ ಶುಭ ಮುಹೂರ್ತದಲ್ಲಿ ತಮ್ಮ ಧರ್ಮ ಪತ್ನಿ ಶ್ರೀಮತಿ ಕವಿತಾ ಹಾಗೂ ಅವರ ಸುಪುತ್ರ ಮೋಹಿತ್ ಮತ್ತು ಸೊಸೆ ಶ್ರೀಮತಿ ರಕ್ಷೀತಾ ಇವರುಗಳ ನೇತೃತ್ವದಲ್ಲಿ ದಸರಾ ಹಬ್ಬದ ಪ್ರಯುಕ್ತ ಮಹಾಲಕ್ಷ್ಮೀ ಅಲಂಕಾರಿಕ ಮಹಾ ಪೂಜೆ , ಮಹಾಮಂಗಳಾರತಿ ಹಾಗೂ ಕಾರ್ಮಿಕರಿಗೆ ಉಡುಗೊರೆ ಮತ್ತು ಪ್ರೋತ್ಸಾಹ ಧನ ಸಮಾರಂಭ ಆರ್ ಕೆ ಮೆಟಲ್ ಫಿನ್ನಿಷ್ಸ೯ನ ಕಂಪನಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಭಾರತ ದೇಶದ ಇತಿಹಾಸ ಉಳ್ಳುವ ಕರ್ನಾಟಕ ರಾಜ್ಯದ ನಾಡಹಬ್ಬ (ರಾಜ್ಯ ಉತ್ಸವ) ಆಗಿದೆ.

ಇದು ೧೦ ದಿನಗಳ ಹಬ್ಬವಾಗಿದ್ದು, ನವರಾತ್ರಿ ಸಂಸ್ಕೃತಿ ನಗರಿ ಮೈಸೂರು ಅರಮನೆ ಉತ್ಸವದ ಸಮಯದಲ್ಲಿ ಪ್ರಕಾಶಿಸಲ್ಪಟ್ಟಿದೆ, ದೇವಿಯ ಚಾಮುಂಡೇಶ್ವರಿ ಮೂರ್ತಿಯ ಮೆರವಣಿಗೆ, ವಿಜಯದಶಮಿ ದೇವತೆ (ಶಕ್ತಿ ದೇವತೆ)ಯನ್ನು ವಿವಿಧ ಕಲಾತಂಡಗಳಿಂದ ವಿಜೃಂಭಣೆಯಿಂದ ಆನೆಯ ಮೆರವಣಿಗೆ ಜರುಗುವುದು ಈ ನಮ್ಮ ಹಬ್ಬಗಳಾದ ರಾಷ್ಟ್ರೀಯ ಹಬ್ಬ, ಮಹಾಪುರುಷ ಜಯಂತಿ ಗೌರಿ ಗಣೇಶ,ದಸರಾ, ದೀಪಾವಳಿ, ಯುಗಾದಿ ವರಮಹಾಲಕ್ಷ್ಮಿ, ಹೆಣ್ಣುಮಕ್ಕಳಿಗೆ ವಿಶೇಷವಾಗಿ ನಾಗರಪಂಚಮಿ ಈ ಹಬ್ಬಗಳು ಭಾರತೀಯ ಸಂಸ್ಕೃತಿ ಹಿಂದೂ ಸಂಸ್ಕೃತಿ ಸಂಪ್ರದಾಯ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಪೀಳಿಗೆಗೆ ತಿಳಿಸಿಕೊಡುವ ಪ್ರಯತ್ನ ನಾವು ನೀವು ಮಾಡಬೇಕಾಗಿದೆ ಎಂದು ಕಾರ್ಮಿಕರಿಗೆ ಸಾರ್ವಜನಿಕರಿ ಸನ್ಮಾನಿಸಿ ಹಬ್ಬದ ಉಡುಗೊರೆ ಮತ್ತು ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿಸಿ ಜೆಡಿಎಸ್ ಪ್ರಭಾವಿ ಮುಖಂಡ ಹಾಗೂ ಕಂಪನಿ ಮಾಲೀಕ ಆರ್.ಕೆ ಕುಮಾರ್ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಮಿಕರು ಮತ್ತು ಕಾರ್ಮಿಕ ಕುಟುಂಬದ ಸದಸ್ಯರು, ಸಾರ್ವಜನಿಕರಿಗೆ ಬಂಧು ಭಗನಿಯರು ಮುಂತಾದವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದರ್ಶನ ಪಡೆದು ತೀರ್ಥ ಪ್ರಸಾದ ಪ್ರೀತಿ ಭೋಜನ ಸ್ವೀಕರಿಸಿ ಆನಂದಿಸಿದರು.

ವರದಿ- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!