ಸಿಂಧನೂರು : ತಾಲೂಕಿನ ವಿರೂಪಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ 4ನೇ ಮೈಲ್ ಕ್ಯಾಂಪಿನ ಮಹಾನಂದ ಇಂಡಸ್ಟ್ರಿಸ್ ಪರ್ನಿಚರ್ ತಯಾರಿಸುವ ಘಟಕ ಕಾನೂನು ವಿರೋಧಿಯಾಗಿದೆ ಎಂದು ಪರಿಸರ ರಕ್ಷಣಾ ವೇದಿಕೆ ಸಂಚಾಲಕ ಎಂ,ಗಂಗಾಧರ ತಿಳಿಸಿದ್ದಾರೆ.
ಜನ ಜಾನುವಾರುಗಳಿಗೆ ಕಂಟಕವಾದ, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಘಟಕಕ್ಕೆ ಸಂಬಂಧಿಸಿದಂತೆ ನಮ್ಮ ಹಲವಾರು ಬಾರಿ ಮನವಿ ಮೇರೆಗೆ ಗ್ರಾಮ ಪಂಚಾಯತ್ ದಿನಾಂಕ 27ನೇ ಜನೆವರಿ 2026 ರಂದು ಅಧಿಕೃತ ಆದೇಶ ಹೊರಡಿಸಿದ್ದು, ಆ ಇಂಡಸ್ಟ್ರಿಗೆ ಯಾವುದೇ ರೀತಿಯ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಹಾಗೆಯೇ ಸದರಿ ಆದೇಶವನ್ನು ಉಲ್ಲೇಖಿಸಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಮಗೆ ದಿನಾಂಕ : 9 ನೇ ಫೆಬ್ರುವರಿ 2026 ರಂದು ಪತ್ರ ಬರೆದು ವಿದ್ಯುತ್ ಸ್ಥಗಿತಗೊಳಿಸಲು ತಿಳಿಸಿರುತ್ತಾರೆ.
ಆದರೆ ಪಂಚಾಯತ್ ಆದೇಶವನ್ನು ಲೆಕ್ಕಿಸದೆ ಆ ಸ್ಥಳಕ್ಕೆ ಈಗಾಗಲೇ ವಿದ್ಯುತ್ ಸಂಪರ್ಕ ನೀಡಿರುವುದು ತಿಳಿದುಬಂದಿದ್ದು, ಇದು ಗ್ರಾಮ ಪಂಚಾಯತ್ ಆದೇಶಕ್ಕೂ ಹಾಗೂ ಕರ್ನಾಟಕ ಪಂಚಾಯತ ರಾಜ್ ಕಾನೂನು ನಿಯಮಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನಾವು ಮಾನ್ಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜೆಸ್ಕಾಂ ಉಪವಿಭಾಗ ಕಚೇರಿ ಸಿಂಧನೂರು ಇವರಿಗೆ ಮನವಿ ಪತ್ರ ಸಲ್ಲಿಸಿ ಮಹಾನಂದ ಇಂಡಸ್ಟ್ರಿಗೆ ನೀಡಿರುವ ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಇಲ್ಲವಾದರೆ ಸಾರ್ವಜನಿಕರ ಪರವಾಗಿ ನಾವು ಮೇಲಾಧಿಕಾರಿಗಳು, ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಕಾನೂನು ಸಂಸ್ಥೆಗಳಿಗೆ ದೂರು ನೀಡುವುದು ಹಾಗೂ ಕಾನೂನು ಕ್ರಮಕ್ಕಾಗಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸುತ್ತೇವೆ.
ಈ ವೇಳೆ,ಪರಿಸರ ರಕ್ಷಣಾ ವೇದಿಕೆ ತಾಲೂಕ ಸಮಿತಿ ಸಂಚಾಲಕ ಎಂ. ಗಂಗಾಧರ್, ಕನಕಪ್ಪ ಮುರಣಿ ಹೆಚ್ ಆರ್ ಹೊಸಮನಿ, ನರಸಪ್ಪ ಕಟ್ಟಿಮನಿ, ಮುದಿಯಪ್ಪ ಹೆಚ್ ಎನ್ ಕ್ಯಾಂಪ್, ಮಂಜುನಾಥ್ ದಿದ್ದಗಿ ಸೇರಿದಂತೆ ಇತರರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.




