ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಡ್ಲಿಕೊಪ್ಪ ಗ್ರಾಮದ ಮಹಾಂತೇಶ ಧರಿಗುಂಡ್ ಎಂಬ ಕೊಲಿ ಕಾರ್ಮಿಕ ಸಿದ್ದಪ್ಪ ಗಂಗಪ್ಪ ಜಟ್ಟಣವರ ಇವರ ಹತ್ತಿರ ಕೊಲಿ ಮಾಡಲು ಹೋಗಿದ್ದ.
ಕಡ್ಲಿಕೊಪ್ಪ ಗ್ರಾಮದ ಮಹಾಂತೇಶ ಧರಿಗುಂಡ್ ಇವನು ತಾನು ಮಾಡಿದ ಕೊಲಿ ಮಾಡಿದ್ದೂ1300ರೊಪಾಯಿ ನಿನ್ನೆ ರಾತ್ರಿ ಕೇಳಲು ಸಿದ್ದಪ್ಪ ಗಂಗಪ್ಪ ಜಟ್ಟಣವರ ಅವರ ಹತ್ತಿರ ಹೋದ ಸಂಧರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಸಿದ್ದಪ್ಪ ಗಂಗಪ್ಪ ಜಟ್ಟಣವರ ಸಿಟ್ಟನಿಂದ ಹೊಟ್ಟೆಗೆ ಚಾಕುವಿನಿಂದ ಹಾಕಿ ಮಹಾಂತೇಶ್ ಧರಿಗುಂಡ್ ಇವನಿಗೆ ತಲೆಯ ಎಡ ಭಾಗಕ್ಕೆ, ಮೊಗಿಗೆ ಮತ್ತು ಹೊಟ್ಟೆಗೆ ಜಂಬೆಯಿಂದ ಹೊಡೆದು ಗಂಭೀರ ಗಾಯವಾಗಿದೆ ಎಂದು ಮಹಾಂತೇಶ್ ಸಹೋದರ ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ 108 ಸ್ಟಾಪ್ ಹಾಗೂ ಚಾಲಕ ಪ್ರಶಾಂತ ಮತ್ತು ನರ್ಸ್ ರಾದ ಬಸವರಾಜ ಸ್ಥಳಕ್ಕೆ ಭೇಟಿ ನೀಡಿ ಪ್ರಥಮ ಚಿಕೆತ್ಸೆ ನೀಡಿ ರಾಮದುರ್ಗ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಯಿತ್ತು.
ಮಹಾಂತೇಶ್ ಧರಿಗುಂಡ್ ಅವರಿಗೆ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದ ಕಾರಣ ಹೆಚ್ಚಿನ ಚಿಕೆತ್ಸೆಗೆ ಬಾಗಲಕೋಟೆಯ ಆಸ್ಪತ್ರೆಗೆ ರವಾನಿಸಲಾಗಿದೆ.
ವರದಿ : ಮಂಜುನಾಥ ಕಲಾದಗಿ




