ನಿನ್ನೆ ಸರಿಸುಮಾರು 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಭಾರತಿಯ ಸೇನೆ 19 ಮದ್ರಾಸ್ ಯುನಿಟ್ ರೆಜಮೆಂಟ್ ಮದ್ರಾಸ್ 7 ನಲ್ಲಿ ಸುಮಾರು 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಗದಗ ಜಿಲ್ಲೆ ರೋಣ ತಾಲ್ಲೂಕು ಬೇನಾಳ ಗ್ರಾಮದ ಯೋಧ ರಜೆಯ ನಿಮಿತ್ಯ ಸ್ವಗ್ರಾಮಕ್ಕೆ ಆಗಮಿಸಿದ್ದು ಯೋಧ ಮಹಾಂತೇಶ್. ಹೂವಪ್ಪ.ಹೊಸಮನಿ ವಯಸ್ಸು 26 …. ಯೋಧ ಮಹಾಂತೇಶನ ಸಹೋದರಿಯ ಮಗ ಶೇಖಪ್ಪ. ಮುತ್ತಪ್ಪ. ಮೂಲಿಮನಿ ವಯಸ್ಸು 15…..
ಈತನು 9 ನೇ ತರಗತಿಯಲ್ಲಿ ಮಂಗಳೂರಿನಲ್ಲಿ ಓದುತ್ತಿದ್ದು ಶಾಲೆಯ ರಜೆಯ ನಿಮಿತ್ಯ ಅಜ್ಜಿಯ ಮನೆಗೆ ಬಂದಿದ್ದು ಸ್ನಾನಕ್ಕೆಂದು ಚೊಳಚಗುಡ್ಡ ಗ್ರಾಮದ ಸಮೀಪದಲ್ಲಿರುವ ಮಲಪ್ರಭಾ ನದಿಗೆ ಜಿಗಿದಿದ್ದು ಮುಳುಗುವ ಹಂತದಲ್ಲಿದ್ದ ಅಳಿಯ ಶೇಖಪ್ಪ ನ ಪ್ರಾಣ ಉಳಿಸಲು ನೀರಿಗೆ ಜಿಗಿದ ಯೋಧ ಮಹಾಂತೇಶ್ ನನ್ನು ಬಿಗಿದಪ್ಪಿದ ಶೇಖಪ್ಪ್ ಬಾಲಕ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮೃತ ಭಾರತೀಯ ಸೇನೆಯ 19 ಮದ್ರಾಸ್ ಯುನಿಟ್ ರೆಜಮೆಂಟ್ ಮದ್ರಾಸ್ 7 ರಲ್ಲಿ 7 ವರ್ಷಗಳಿಂದಸೇವೆ ಸಲ್ಲಿಸುತ್ತಿದ್ದು ರಜೆಗೆಂದು ಯೋಧ ಮಹಾಂತೇಶ್ ಸ್ವಗ್ರಾಮ ರೋಣ ತಾಲ್ಲೂಕಿನ ಬೇನಾಳ ಗ್ರಾಮಕ್ಕೆ ಆಗಮಿಸಿದ್ದನು ಎನ್ನಲಾಗ್ತಾ ಇದೆ.
ಇನ್ನು ಬಾದಾಮಿ ಅಗ್ನಿ ಶಾಮಕ ಠಾಣೆಯ A.F.S.O…… ಬಿ. ಪಿ. ಮರಡಿ ಹಾಗೂ ಅಗ್ನಿ ಶಾಮಕ ಬಾದಾಮಿ ಠಾಣೆ ಸಿಬ್ಬಂದಿಗಳು ಸೇರಿ ಮಲಪ್ರಭಾ ನದಿಯಲ್ಲಿ ಬೋಟ್ ಮೂಲಕ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದು ಯೋಧ ಮಹಾಂತೇಶ್ ನ ಮೃತ ದೇಹ ಸಿಕ್ಕಿದ್ದು ,, ಯೋಧನ ಸಹೋದರಿಯ ಮಗ ಬಾಲಕ ಶೇಖಪ್ಪ ನ ಮೃತ ದೇಹ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಬಾದಾಮಿ ಪೊಲೀಸ್ ಇಲಾಖೆಯ ಪಿ. ಎಸ್. ಐ. ವಿಠಲ್ ನಾಯಿಕ್ ನೇತೃತ್ವದಲ್ಲಿ ಬಾದಾಮಿ ಪೊಲೀಸರು ಜೊತೆಗೂಡಿ ಮೃತ ದೇಹದ ಪತ್ತೆಗೆ ಮಲಪ್ರಭಾ ನದಿಯಲ್ಲಿ ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.
ರೋಣ ತಾಲ್ಲೂಕಿನ ಬೇನಾಳ ಗ್ರಾಮಸ್ಥರು ಮಲಪ್ರಭಾ ನದಿ ದಡದಲ್ಲಿ ತಂಡೋಪ ತಂಡವಾಗಿ ಸೇರಿದ್ದು ಮೃತ ಯೋಧನು ಆವರ ತಂದೆ ತಾಯಿಗೆ ಒಬ್ಬನೇ ಮಗ ಹಾಗೂ ಮೂರು ಜನ ಸಹೋದರಿಯರು ಎಂದು ತಿಳಿದುಬಂದಿದೆ. ಮಗನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ವರದಿ:ಎಸ್, ಎಸ್, ಕವಲಾಪುರಿ