ಚಿಕ್ಕೋಡಿ:ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚಿಕ್ಕೋಡಿ ವಿಧನಸಭಾಕ್ಷೇತ್ರದ ಖಡಕಲಾಟ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಅಣ್ಣಾಸಾಹೇಬ ಜೊಲ್ಲೆ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಶ್ರೀ ನರೇಂದ್ರ ಮೋದಿ ಜಿ ಅವರು ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದು ಭಾರತದ ಅಭ್ಯುದಯಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ ಅವರನ್ನು 3 ನೇ ಅವಧಿಗೆ ಪ್ರಧಾನಮಂತ್ರಿಯನ್ನಾಗಿಸಲು ಹಾಗೂ ಚಿಕ್ಕೋಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನನ್ನನ್ನು ಬೆಂಬಲಿಸಿ,ಪ್ರಚಂಡ ಬಹುಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ಸಭೆಯಲ್ಲಿ ಜಿಲ್ಲಾಧ್ಯಕ್ಷ ಶ್ರೀ ಸತೀಶ ಅಪ್ಪಾಜಿಗೊಳ,ಶ್ರೀ ವಿಶ್ವನಾಥ ಕಮತೆ,ಶ್ರೀ ಎನ. ಜಿ. ಪಾಟೀಲ,ಶ್ರೀ ಪ್ರಲ್ಹಾದ ಪಾಟೀಲ, ಶ್ರೀ ಕಾಶಿನಾಥ ಕಮತೆ,ಶ್ರೀ ರಾವಸಾಬ ಝಿಪರೆ,ಶ್ರೀವಿನಾಯಕ ಪಾಟೀಲ, ಶ್ರೀ ಪವನ ಮಹಾಜನ,ಶ್ರೀ ಉಮೇಶ ಘಾಟಗೆ,ಸ್ಥಳೀಯ ಮುಖಂಡರು,ಗಣ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ