ಸೇಡಂ: ತಾಲೂಕಿನಲ್ಲಿ ಸತತವಾಗಿ ಸರಿಯುತ್ತಿರುವ ಮಳೆಯಿಂದ ಅಪಾರ ಬೆಳೆ ಹಾನಿಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಹೆಸರು, ಹತ್ತಿ, ತೊಗರಿ, ಇನ್ನಿತರೆ ಬೆಳೆಗಳು ನೀರಿನಲ್ಲಿ ನಿಂತಿವೆ. ಸಾಲ-ಸೂಲ ಮಾಡಿ ಸಾವಿರ ರೂಪಾಯಿಗಳು ಖರ್ಚು ಮಾಡಿ ಬೆಳೆದ ರೈತರಿಗೆ ಮಳೆಯಿಂದ ಹೊಲಗಳಲ್ಲಿ ನೀರು ನಿಂತು ಬೆಳೆದ ಬೆಳೆ ಕೊಳೆತು ಹೋಗುವ ಸ್ಥಿತಿಯಲ್ಲಿದೆ ಅಕಾಲಿಕ ಮಳೆಯೊಂದಿಗೆ ಪರಿಣಾಮ ಹಲವು ಕಡೆಗಳಲ್ಲಿ ಭತ್ತದ ಬೆಳೆ ನೆಲಕ್ಕುರಳಿದೆ.ಕೋಯ್ಲಿಗೆ ಬಂದ ಬೆಳೆ ಮಣ್ಣು ಪಾಲಾಗಿದೆ.ಹೀಗಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಈ ವರ್ಷ ರೈತರಿಗೆ ರಸಗೊಬ್ಬರ ಸಿಗದೆ ಪರದಾಡುವ ಪರಿಸ್ಥಿತಿಯಲ್ಲಿ ಇದ್ದರೂ ಕೂಡಾ ರೈತರು ಕೃಷಿಯನ್ನು ಬಿಡದೇ ಅತಿಹೆಚ್ಚು ಬಿತ್ತನೆ ಮಾಡಿ ಬೆಳೆದಿದ್ದರು. ಆದ ಕಾರಣ ಸರಕಾರ ಎಚ್ಚೆತ್ತುಕೊಂಡು ಕಂದಾಯ ಹಾಗೂ ಕೃಷಿ ಇಲಾಖೆಗಳ ಜಂಟಿ ಸಮಿಕ್ಷೆಯನ್ನು ಕೈಗೊಂಡು ನೊಂದ ರೈತರಿಗೆ ತ್ವರಿತವಾಗಿ ಪ್ರತಿ ಎಕರೆಗೆ 10000 ಸಾವಿರ ರೂಪಾಯಿಗಳಂತೆ ಪರಿಹಾರ ವಿತರಿಸಲು ಮುಂದಾಗಬೇಕು, ಸಂಕಷ್ಟಕ್ಕೆ ಸಿಲುಕಿದ ಅನ್ನದಾತರ ಬೆನ್ನಿಗೆ ಸರಕಾರ ನಿಂತು ರೈತರಿಗೆ ಶೀಘ್ರವಾಗಿ ಪರ್ಯಾಯ ನೀಡಬೇಕು ಎಂದು ಸಮಾಜ, ಸೇವಕರಾದ ಮಹಾಂತೇಶ ಸಾಹುಕಾರ ಶಕಲಾಸಪಲ್ಲಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




