Ad imageAd image

ಮಹಾರಾಷ್ಟ್ರ ಚುನಾವಣೆ: ಕರ್ನಾಟಕಕ್ಕೆ ಶುರುವಾಯ್ತು ಹೊಸ ತಲೆನೋವು…?

Bharath Vaibhav
ಮಹಾರಾಷ್ಟ್ರ ಚುನಾವಣೆ: ಕರ್ನಾಟಕಕ್ಕೆ ಶುರುವಾಯ್ತು ಹೊಸ ತಲೆನೋವು…?
WhatsApp Group Join Now
Telegram Group Join Now

ವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನವೆಂಬರ್ 20ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ

ಇದೀಗ ಕರ್ನಾಟಕಕ್ಕೆ ಹೊಸ ತಲೆನೋವು ಶುರುವಾಗಿದೆ.

ದೇಶದ ಪ್ರಮುಖ ಹಾಗೂ ದೊಡ್ಡ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. ಈ ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ ರಾಜಕೀಯ ಹೈಡ್ರಾಮವೇ ನಡೆದೋಗಿದೆ. ಆದರೆ, ಇದೀಗ ಮಹಾರಾಷ್ಟ್ರ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಮಹಾರಾಷ್ಟ್ರದ ಕೆಲವು ಪುಂಡರು ಹೊಸ ಕ್ಯಾತೆಯನ್ನು ಪ್ರಾರಂಭಿಸಿದ್ದಾರೆ. ಇದರಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿ ಆತಂಕ ಶುರುವಾಗಿದೆ.

 

ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಬೆಳಗಾವಿ ಗಡಿ ವಿವಾದ ಹಲವು ದಶಕಗಳಿಂದ ಇದೆ. ಕರ್ನಾಟಕದ ನ್ಯಾಯ ಸಮ್ಮತವಾದ ವಾದವನ್ನು ಮಹಾರಾಷ್ಟ್ರ ಒಪ್ಪಿಕೊಂಡಿಲ್ಲ. ಬೆಳಗಾವಿಯ ಬಗ್ಗೆ ಅನವಶ್ಯಕ ಕ್ಯಾತೆಯನ್ನು ತೆಗೆಯುತ್ತಲ್ಲೇ ಇದೆ

ಆದರೆ, ಮಹಾರಾಷ್ಟ್ರದಲ್ಲಿ ಚುನಾವಣೆ ಕರ್ನಾಟಕದ ಮೇಲೂ ಗಡಿ ವಿಚಾರಕ್ಕೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಕರ್ನಾಟಕದ ಬೆಳಗಾವಿಯಲ್ಲಿ ಎಂಇಎಸ್ ಕಿರಿಕ್‌ ಶುರುಮಾಡಿದೆ.

ಬೆಳಗಾವಿಯಲ್ಲಿ ಕರಾಳ ದಿನಕ್ಕೆ ಸಿದ್ಧತೆ: ಮಹಾರಾಷ್ಟ್ರ ಚುನಾವಣೆಯಲ್ಲಿ ಲಾಭ ಗಳಿಸಲು ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಈಗಲಿಂದಲೇ ಶುರುಮಾಡಿಕೊಂಡಿದೆ. ಗಡಿಯಲ್ಲಿ ಕಿರಿಕ್ ಮಾಡಲು ‌ನಾಡದ್ರೋಹಿ ಎಂಇಸ್‌ ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನದ ಮೆರವಣಿಗೆ ‌ನಡೆಸಲು‌ ಎಂಇಎಸ್‌ ನಿರ್ಧಾರಿಸಿದೆ.

ಬೆಳಗಾವಿಯ‌ ಮರಾಠಾ ಮಂಡಲ ಕಾರ್ಯಾಲಯದಲ್ಲಿ ಎಂಇಎಸ್ ನಾಯಕರ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕರಾಳ ದಿನದ ಮೆರವಣಿಗೆ ನಡೆಸಲು ಎಂಇಎಸ್ ನಿರ್ಧಾರಿಸಿದೆ. ನವೆಂಬರ್ 1 ರಂದು ಚೆನ್ನಮ್ಮ ‌ವೃತ್ತದಲ್ಲಿ ಬೃಹತ್ ರಾಜ್ಯೋತ್ಸವ ‌ಸಂಭ್ರಮಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಆದರೆ, ಮತ್ತೊಂದೆಡೆ ‌ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನ ಆಚರಿಸಲು ಮುಂದಾಗಿದೆ. ಮಹಾರಾಷ್ಟ್ರ ನಾಯಕರನ್ನು ಆಹ್ವಾನಿಸಿ ಗಡಿಯಲ್ಲಿ ತಕರಾರು ಪ್ರಾರಂಭಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ವಿಧಾನಸಭೆ ‌ಚುನಾವಣೆ ಘೋಷಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಎಂಇಎಸ್ ನಾಯಕರ ಆಹ್ವಾನಕ್ಕಾಗಿಯೇ ಮಹಾರಾಷ್ಟ್ರ ರಾಜಕೀಯ ಪಕ್ಷಗಳ ನಾಯಕರು ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಮರಾಠಿ ಅಸ್ಮಿತೆಯ ಲಾಭ ಪಡೆಯುವುದಕ್ಕಾಗಿ ಮಹಾ ನಾಯಕರ ಕಸರತ್ತು ಎಂದು ಹೇಳಲಾಗಿದೆ.

ಎಂಇಎಸ್ ಕ್ಯಾತೆ: ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್‌ ಸದಾ ಕ್ಯಾತೆ ಮಾಡುತ್ತಲ್ಲೇ ಇರುತ್ತದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯಲ್ಲಿ ಸಮಸ್ಯೆ ಮಾಡುವುದು ಇದೇ ಮೊದಲಲ್ಲ. ಆದರೆ, ಇದೀಗ ಮಹಾರಾಷ್ಟ್ರದಲ್ಲಿ ಚುನಾವಣೆ ಪ್ರಾರಂಭವಾಗುತ್ತಿರುವುದಕ್ಕೂ, ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವ ದಿನಾಂಕ ಸಮೀಪದಲ್ಲಿ ಇದೆ. ಹೀಗಾಗಿ, ಕರ್ನಾಟಕ ಸರ್ಕಾರವು ಬೆಳಗಾವಿಯಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸುವ ಸಾಧ್ಯತೆ ಇದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!