ಸಿಂಧನೂರು : ಮೇ 5 ನಗರದ ತಾಲೂಕ ಕಛೇರಿಯಲ್ಲಿ ತಾಲೂಕ ಆಡಳಿತ ವತಿಯಿಂದ ಭಗೀರಥ ಮಹಾರಾಜರ ಜಯಂತಿಯನ್ನು ಸಮುದಾಯದ ಮುಖಂಡರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಹಾಗೂ ಭಗೀರಥ ಸಮುದಾಯದ ಜನರಿಂದ ಸರಳವಾಗಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೆಂಕಟರಾವ್ ನಾಡಗೌಡ್ರು ಮಾಜಿ ಸಚಿವರು ಮಾತನಾಡಿ ಸೂರ್ಯವಂಶದ ಮಹಾರಾಜ ಭಗೀರಥರು ತನ್ನ ಜನರು ಹಾಗೂ ಲೋಕ ಕಲ್ಯಾಣಾರ್ಥವಾಗಿ ಹಿಮಾಲಯದಲ್ಲಿ ತಪಸ್ಸಿಗೆ ಕುಳಿತು ಗಂಗೆಯನ್ನು ಧರೆಗೆ ತಂದಂತಹ ಮಹಾಪುರುಷರು ಇದಕ್ಕಾಗಿ ಅವರು ಕೈಗೊಂಡ ಪ್ರಯತ್ನಗಳು ತಪಸ್ಸಿನ ಶ್ರಮದ ಫಲವಾಗಿ ಸಾಕ್ಷಾತ್ ಶಿವನೇ ಪ್ರತ್ಯಕ್ಷವಾಗಿ ಗಂಗೆಯನ್ನು ಭೂಮಿಗೆ ಕಳುಹಿಸಿಕೊಟ್ಟನು ಎಂಬ ನಂಬಿಕೆಯನ್ನು ನಾವು ಅರಿಯಬೇಕಾಗಿದೆ ಎಂದರು.
ಈ ವೇಳೆ ಪಂಪನಗೌಡ ಬಾದರ್ಲಿ. ಕೆ ಭೀಮಣ್ಣ ವಕೀಲರು. ರವಿ ಗೌಡ. ಹನುಮೇಶ್ ಉಪ್ಪಾರ್ ಹಾಗೂ ಉಪ್ಪಾರ್ ಸಮಾಜದ ಗ್ರಾಮಸ್ಥರು. ಮುಖಂಡರು ಹಾಜರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




