ಲಿಂಗಸುಗೂರು: ಇಂದು ದೇಶಾದ್ಯಂತ ತನ್ನ ಘೋರ ತಪಸ್ಸಿನಿಂದ ದೇವಗಂಗೆಯನ್ನು ಧರೆಗೆ ತಂದ ಮಹರ್ಷಿ ಭಗೀರಥ ಜಯಂತಿಯ ಸಂಭ್ರಮಾಚರಣೆ
ಚಿನ್ನದ ನಾಡಿನಲ್ಲಿ ಇಂದು ಬೆಳಿಗ್ಗೆ ಹಟ್ಟಿ ಚಿನ್ನದ ಗಣಿ ಪಟ್ಟಣದ ಕಾಮ್ರೆಡ್ ಅಮರಗುಂಡಪ್ಪ ಬಸ್ ನಿಲ್ದಾಣದ ಹತ್ತಿರವಿರುವ ಭಗಿರಥ ಸರ್ಕಲ್ ಬಳಿ ವಸಂತ ಋತುವಿನ ವೈಶ್ಯಕ ಮಾಸದ ಸಪ್ತಮಿ ಎಂದು ದೇವಗಂಗೆ ಧರೆಗೆ ಬಂದ ದಿನವನ್ನು ಗಂಗಾ ಸಪ್ತಮಿ ಎಂದು ಆಚರಿಸಲಾಗುತ್ತದೆ ಮತ್ತು ಈ ದಿನದಂದೇ ಭಗೀರಥ ಜಯಂತಿ ಆಚರಿಸಲಾಗುತ್ತದೆ ಅದರಂತೆ ಭಗಿರಥ ಉಪ್ಪಾರ್ ಸಮಾಜದ ಗೌರವಾಧ್ಯಕ್ಷರಾದ ಎನ್ ಸ್ವಾಮಿ ನಾಯ್ಕೋಡಿ ಮತ್ತು ಭಗೀರಥ ಉಪ್ಪರ್ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್ ಮಧುಶ್ರೀ ನೇತೃತ್ವದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಶ್ರೀ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಶ್ರೀ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ, ಕಾರ್ಮಿಕ ಮುಖಂಡರಾದ ವಾಲೆ ಬಾಬು, ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಸಂಧಾನಿ ಎಂ ಡಿ, ಶ್ರೀ ಮಹರ್ಷಿ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಾಲಪ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು ಶ್ರೀ ಮಹರ್ಷಿ ಭಗೀರಥ ಜಯಂತಿ ಆಚರಣೆಯ ಸಂದರ್ಭದಲ್ಲಿ ಎಲ್ಲಾ ಧರ್ಮದ ಮುಖಂಡರು ಪಾಲ್ಗೊಂಡಿದ್ದರು ಮತ್ತು ಮುಸ್ಲಿಂ ಧರ್ಮದ ಅಂಜುಮನ್ ಕಮಿಟಿ ಸದಸ್ಯರು ಶ್ರೀ ಭಗೀರಥ ಮಹರ್ಷಿಗೆ ಮಾಲಾಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಮಾಜಿ ಎಪಿಎಂಸಿ ಸದಸ್ಯರು ಹಾಗೂ ಯುವ ಕಾಂಗ್ರೆಸ್ ಮುಖಂಡರಾದ ಅಮ್ಜದ್ ಸೆಟ್ ಶ್ರೀ ಮಹರ್ಷಿ ಭಾವಚಿತ್ರಕ್ಕೆ ಮಾಲಾಪಣಿ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಮಾತನಾಡಿದ ವಿನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ನರಸಪ್ಪ ಯಾದವ್ ಭಗಿರಥರ ಕೊಡುಗೆ ಅಪಾರವಾದದ್ದು ಮಹಾ ಕಠಿಣ ತಪಸ್ಸಿನಿಂದ ಗಂಗಾಮಾತೆಯನ್ನು ಧರೆಗೆ ತಂದ ಮಹಾಋಷಿಗಳು ಇಂಥವರ ಜಯಂತಿಯಲ್ಲಿ ಪಾಲ್ಗೊಳ್ಳುವುದು ನಮ್ಮ ಪುಣ್ಯ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮಹರ್ಷಿ ಭಗೀರಥ ಜಯಂತಿಯ ಶುಭ ಕೋರಿದ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ, ಕಾರ್ಮಿಕ ಮುಖಂಡರಾದ ವಾಲೇ ಬಾಬು, ಹೆಚ್ ಎ ಲಿಂಗಪ್ಪ, ಗಂಗಪ್ಪ ಗಲಗ್, ಚಂದ್ರಶೇಖರ್, ಸಿದ್ದಪ್ಪ ಮುಂಡರಗಿ, ರಂಗನಾಥ ಮುಂಡರಗಿ,
ನಾಗರೆಡ್ಡಿ ಜೇರಬಂಡಿ, ಶಾಂತಪ್ಪ ಆನ್ವರಿ, ಅಬ್ರಾಹಿಂ, ಬಾಬು ನಾಯ್ಕೋಡಿ, ಶಿವು ತಬಲಾಜಿ, ದೇವೇಂದ್ರಪ್,ಪರಮೇಶ್ ಯಾದವ್, ಹನುಮಂತರೆಡ್ಡಿ, ನರಸಪ್ಪ ಯಾದವ್, ಶಂಶುದ್ದೀನ್ ವಕೀಲರು, ಸೂಗಪ್ಪ ಗಲಗ್, ಆದಪ್ಪ ಕರಿಯ, ವೀರೇಶ್, ರಮೇಶ್ ಹುಳಿಮಹೇಶ್ವರ, ಹನುಮಂತ, ಗಂಗಾಧರ್ ನೆಲಗಿ, ಮಂಜು ಬಡಿಗೇರ್, ಗಿರಿ, ಬಾಲಪ್ಪ ನಾಯಕ್ ಹನುಮಂತ ರಾಂಪುರ ಹಳ್ಳಿ, ರಾಜು ಮೆಡಿಕಲ್, ಗಿರಿ ವೆಂಕಟೇಶ್, ಬಸವರಾಜ್ ಗುರಿಕಾರ್, ಕನಕರಾಜ ಗುರಿಕಾರ್, ಆಂಜನೇಯ ಗೌಡ ಗುರುಕಾರ್ ಸುರೇಶ್ ಗೌಡ ಗುರಿಕಾರ್, ಚಂದ್ರಶೇಖರ್ ಎಂ ಸಿ, ಮೌನೇಶ್ ಕಾಕನಗರ್, ಯೋಗಪ್ಪ ದೊಡ್ಮನಿ, ಹನೀಫ್, ನಿಂಗಪ್ಪ, ಅಲ್ಲಾಭಕ್ಷು, ಸಿದ್ದರಾಮ, ರಾಮಣ್ಣ, ವೆಂಕೋಬ ಬೈಚಬಾಳ, ಯಂಕೋಬ ಪವಡೆ, ಶಿವಪುತ್ರ, ಭೀಮ್ ರಾಯ, ಮೌಲ ಮಾಸ್ಟರ್, ಭೀಮರಾಯ ಭಜಂತ್ರಿ, ಅನ್ವರ್ ಸೇಟ್, ಅಮೀನ್, ಗೋರಿ, ರೋಹನ್ ಮಧುಶ್ರೀ ಸೇರಿದಂತೆ ಇನ್ನೂ ಅನೇಕ ಮುಖಂಡರು ಮತ್ತು ಭಗೀರಥ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸ್ ಮಧುಶ್ರೀ ಹಟ್ಟಿ ಚಿನ್ನದ ಗಣಿ




