ವಿಜಯಪುರ : ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಬಸವನ ಬಾಗೇವಾಡಿಯ ಪಟ್ಟಣದ ಬಸವ ವೇದಿಕೆ ಸಭಾಭವನದಲ್ಲಿ ನಡೆದ ಜಯಂತೋತ್ಸವವನ್ನು ಊರಿನ ಮುಖಂಡರು ಸರ್ಕಾರಿ ಅಧಿಕಾರಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತಾಲೂಕು ದಂಡಾಧಿಕಾರಿ ವೈ ಎಸ್ ಸೋಮನಕಟ್ಟಿಆವರು ವಾಲ್ಮೀಕಿಯವರ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.
ನಂತರ ಬಸವರಾಜ್ ಹಂಚಲಿ ಮಾತನಾಡಿ ಮಹರ್ಷಿ ವಾಲ್ಮೀಕಿಯವರ ಬಗ್ಗೆ ಉಪನ್ಯಾಸ ನೀಡಿದರು.
ವೇದಿಕೆಯ ಮೇಲೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ಹಿರೇಮನಿ ಜಗದೇವಿ ಗುಂಡಳ್ಳಿ, ಈರಣ್ಣ ಪಟ್ಟಣಶೆಟ್ಟಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ,ಸುರೇಶ ಹಾರಿವಾಳ, ಅರವಿಂದ್ ಸಾಲವಾಡಗಿ, ಅಶೋಕ್ ಛಲವಾದಿ, ಮಹಾಂತೇಶ್ ಸಾಸಬಾಳ, ಊರಿನ ಮುಖಂಡರು ಸರ್ಕಾರಿ ಅಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಕೃಷ್ಣ ಎಸ್ ರಾಥೋಡ್




