ದಾವಣಗೆರೆ: ಸಾಮಾನ್ಯವಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದನ್ನು ಕೇಳಿರುತ್ತೇವೆ. ಆದರೆ, ಇದೀಗ ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವರ್ಲಹಳ್ಳಿಯ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ಮಹಿಳೆಯರ ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರ್ಲಹಳ್ಳಿಯ ಅನಿತಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಎರಡು ಗಂಡು, ಒಂದು ಹೆಣ್ಣು ಮಗು ಜನಿಸಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ. ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು ಇದೇ ಮೊದಲು. ನಾಲ್ಕೈದು ವರ್ಷಗಳಿಂದ ಈ ದಂಪತಿಗೆ ಮಕ್ಕಳು ಆಗಿರಲಿಲ್ಲ.
ಇತ್ತೀಚೆಗಷ್ಟೇ ಗರ್ಭ ಧರಿಸಿದ್ದಾಗ ಸ್ಕ್ಯಾನ್ ಮಾಡಲಾಗಿತ್ತು. ಆಗ ಗರ್ಭದಲ್ಲಿ ಮೂರು ಮಕ್ಕಳಿರುವುದು ತಿಳಿದುಬಂದಿತ್ತು. ಈ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೆವು. ಕಳೆದ ದಿನ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಿದರು ಪತ್ನಿ ಸ್ಪಂದನಾ ಸಾವಿನ ನೋವು ಮರೆಯಲು ಇದನ್ನ ಮಾಡ್ತಿದ್ದೀನಿ: ವಿಜಯ್ ರಾಘವೇಂದ್ರ ಹೇಳಿದ್ದೇನು? ಅಲ್ಲದೆ, ನಾವು ಸಹಜ ಹೆರಿಗೆ ಮಾಡಿಸುವ ಉದ್ದೇಶ ಹೊಂದಿದ್ದೆವು.
ಆದರೆ ಒಂದು ಮಗುವಿನ ಪೊರೆ ಒಡೆದು ಹೋಗಿ ಶೌಚ ಮಾಡಿಕೊಂಡಿದ್ದರಿಂದ ಹಿರಿಯ ಪ್ರಸೂತಿ ತಜ್ಞರಿಂದ ಮಾಹಿತಿ ಪಡೆದು, ಸಿಸೇರಿಯನ್ ಮಾಡಿ ಮಕ್ಕಳನ್ನು ಹೊರತೆಗೆದಿದ್ದೇವೆ. ಇದೇ ಮೊದಲ ಬಾರಿ ಇಂತಹ ಕೇಸ್ ನೋಡಿದ್ದೇನೆ ಎಂದು ಡಾ.ಮಹೇಶ್ ಹೇಳಿದ್ದಾರೆ.




