Ad imageAd image

ಶ್ರೀ ಬಸವಜ್ಯೋತಿ ಫೌಂಡೇಶನ್ ವತಿಯಿಂದ ಐನಾಪುರದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಜಯಂತಿ ಸಂಭ್ರಮ

Bharath Vaibhav
ಶ್ರೀ ಬಸವಜ್ಯೋತಿ ಫೌಂಡೇಶನ್ ವತಿಯಿಂದ ಐನಾಪುರದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಜಯಂತಿ ಸಂಭ್ರಮ
WhatsApp Group Join Now
Telegram Group Join Now

ಐನಾಪುರ: ಸ್ಥಳೀಯ ಶ್ರೀ ಬಸವಜ್ಯೋತಿ ಫೌಂಡೇಶನ್ ವತಿಯಿಂದ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಮಹಾತ್ಮ ಜ್ಯೋತಿಬಾ ಫುಲೆ ರವರ 199ನೇ ಜನ್ಮ ದಿನೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣದ ಪ್ರಮುಖ ವೃತ್ತವಾದ ಸರ್ದಾರ್ ಪಟೇಲ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮಕ್ಕೆ ಪಟ್ಟಣದ ಗಣ್ಯರು ಹಾಗೂ ಅನೇಕ ಮುಖಂಡರು ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ದಾದಾ ಪಾಟೀಲ್, ಅರುಣಾ ಗಾಣಿಗೇರ, ತಮ್ಮಣ್ಣ ಪಾರಶೆಟ್ಟಿ, ಕುಮಾರ ಜಯಕರ, ಮನೋಜ್ ವಕೀಲರು, ಸಂಜೀವ್ ಕೋಳಿ, ಹಾಗೂ ಎಸ್. ಎಂ. ಮಗದುಮ್ ಪಾಲ್ಗೊಂಡಿದ್ದರು.

ಇವರೊಂದಿಗೆ ಗಜಾನನ ಮಿತ್ರ ಮಂಡಳಿಯ ಸದಸ್ಯರು, ಭೀಮು ಬಸ್ತವಾಡ, ಸಂದೀಪ್ ಜಾಧವ, ಪುಂಡಲೀಕ್ ಕಟ್ಟಿಮನಿ, ಕೃಷ್ಣಾ ಪೋತದಾರ, ಸಂಜು ಮಾಲಗಾಂವೆ, ಪ್ರಕಾಶ್ ಮಾಲಗಾಂವೆ, ನಾಗೇಶ್ ಸೊಂದಕರ್, ಕುಮಾರ್ ಸೊಂದಕರ್, ಕುಮಾರ್ ಕಾಗಲಿ, ಗಜಾನನ ಕಾಗಲಿ, ಉಮೇಶ್ ಕಾಗಲಿ, ಮಹೇಶ್ ಕಾಗಲಿ, ಕಾಂತೇಶ್ ಕಾಗಲಿ, ಮಂಜುನಾಥ ಕಾಗಲಿ, ನಿತಿನ್ ತೊಡ್ಕರ್, ಪ್ರಶಾಂತ್ ತೊಡ್ಕರ್, ರವಿ ಮಾಳಿ, ಜ್ಯೋತಿಬಾ ಜಿರಗಾಳೆ, ಸತ್ಯಪ್ಪಾ ನಂದನಿಕರ, ಬಸು, ಬರಮು ಬೆಳಕೂಡ್, ಮಹಾದೇವ ಸೊಂದಕರ್, ಸಂದೀಪ್ ಬೆಳಕೂಡ್, ಸಂತೋಷ್ ಬೆಳಕೂಡ್, ಹಣಮಂತ ಕಾಗಲಿ, ಸಾಗರ ಕಾಗಲಿ, ರಾಜು ಮಾಳಿ, ರಮೇಶ್ ಕಾಗಲಿ, ಸುರೇಶ ಮಾಳಿ, ಬಸು ಕಾರತಗಿ ಸೇರಿದಂತೆ ಪಟ್ಟಣದ ನೂರಾರು ನಾಗರಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ:ಪ್ರಲ್ಹಾದ ವಾಘಮೋರೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!