ಮನ್ನಾಏಖೇಳಿ:ಸತತವಾಗಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮನ್ನಾಏಖೇಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಮನ್ನಾಏಖೇಳ್ಳಿ ಗ್ರಾಮದಿಂದ ಹಳ್ಳಿಖೇಡ ಬಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದ ಬೊಂಬಳಗಿ ಗ್ರಾಮದ ಹತ್ತಿರ ಇರುವ ಸೇತುವೆ ಗುರುವಾರ ಕುಸುದಿದೆ.ಸದರಿ ಸ್ಥಳಕ್ಕೆ ಪಿಎಸ್ಐ ಮಹೇಂದ್ರ ಕುಮಾರ್ ಪೊಲೀಸ್ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿದ್ದಾರೆ.
ಮುಂಜಾಗ್ರತ ಕ್ರಮವಾಗಿ ಅನಾಹುತ ತಪ್ಪಿಸಲು ಸದರಿ ಸ್ಥಳದಲ್ಲಿ ಬ್ಯಾರಿಕೆಡ್ ಅಳವಡಿಸಿ ಸಾರ್ವಜನಿಕರು ಹೋಗದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.
ವರದಿ:ಸಜೀಶ ಲಂಬುನೋರ




