ಬೆಂಗಳೂರು :ಸ್ವಾಮಿ ವಿವೇಕಾನಂದರ ೧೬೩ನೇ ಜಯಂತಿ ಪ್ರಯುಕ್ತ ಮುನೇಶ್ವರ ಲೇಔಟ್ ಶ್ರೀಗಂಧನಗರ ದಲ್ಲಿರುವ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ ಪ್ರದಾನ ಕಚೇರಿಯಲ್ಲಿ ಪಕ್ಷದ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಹೇಶ್ ಗೌಡ್ರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಪುನಸ್ಕಾರ ಪುಷ್ಪಾರ್ಚನೆ ಮಾಡಿ ವಿಕಲ ಚೇತನರ ಮನೋವಿಕಾಸ ಕೇಂದ್ರಕ್ಕೆ ಮತ್ತು ಗಾಂಧಿ ವೃದ್ಧಾಶ್ರಮದಕ್ಕೆ ತೆರಳಿ ಅಲ್ಲಿರುವ ಬುದ್ದಿಮಾಂದ್ಯದವರಿಗೆ ಮತ್ತು ವಿಕಲಚೇತನರಿಗೆ ಅಕ್ಕಿ ಮೂಟೆ,ಹಣ್ಣು ಹಂಪಲು ವಿತರಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಮಾತನಾಡಿ ಅವರು ಸುಮಾರು ವರ್ಷಗಳಿಂದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಯುವ ದಿನವಾಗಿ ಅಚರಿಸಲಾಗುತ್ತಿದೆ. 1863ರಲ್ಲಿ ಹುಟ್ಟಿದರು 39ವರ್ಷಗಳ ಕಾಲ ಬದುಕಿದ್ದರು, ಅಷ್ಟು ಅವಧಿಯಲ್ಲಿ ವಿಶ್ವನಾಯಕರಾಗಿ ಹೊರಹಮ್ಮಿದ್ದರು. ಜಿನಿವಾ ಸಮ್ಮೇಳನದಲ್ಲಿ ಸಹೋದರತ್ವ ಭಾಷಣದಿಂದ ಇಡಿ ವಿಶ್ವದ ಗಮನ ಸೆಳದರು. ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸಂದೇಶವನ್ನು ಯುವ ಜನತೆಗೆ ಕೊಟ್ಟರು ಎಂದು ಮಹೇಶ್ ಗೌಡ್ರು ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ನಿಂಗಪ್ಪ, ನಾಗರಾಜ್,ಪ್ರಸಾತ್, ಎಚ್ ಡಿ ನಾಗೇಶ್, ರಮೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ :ಅಯ್ಯಣ್ಣ ಮಾಸ್ಟರ್